
ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ ಮಾಡಿಕೊಂಡಿದೆ.
ಚೀನಾದ ಒಟ್ಟಾರೆ ರಕ್ಷಣಾ ಬಜೆಟ್ ನಲ್ಲಿ ಶೇ.7.6ರಷ್ಟು ಏರಿಕೆಯಾಗಿದ್ದು, ಬಜೆಟ್ ನ ಗಾತ್ರ ಸುಮಾರು 146 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚೀನಾದ ಈ ರಕ್ಷಣಾ ಬಜೆಟ್ ನ ಗಾತ್ರ ಭಾರತದ ರಕ್ಷಣಾ ಬಜೆಟ್ ಗಿಂತ 4 ಪಟ್ಟು ಹೆಚ್ಚು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟಿರುವ ಚೀನಾ ಶತಾಯಗತಾಯ ಅದನ್ನು ಸಾಧಿಸಲೇಬೇಕು ಎಂದು ಹವಣಿಸುತ್ತಿದ್ದು, ಇದೇ ಕಾರಣ್ಕಕಾಗಿ ಚೀನಾ ಜಗತ್ತಿನ ದೊಡ್ಡಣ್ಣ ಅಮೆರಿಕದೊಂದಿಗೆ ವೈರತ್ವ ಕಟ್ಟಿಕೊಂಡಿದೆ. ಹೀಗಾಗಿ ಚೀನಾ ತನ್ನ ಆರ್ಥಿಕ ಸಂಕಷ್ಟದ ನಡುವೆಯೂ ತನ್ನ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡಿಕೊಂಡಿದೆ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಪ್ರಸಕ್ತ ಸಾಲಿನ ರಕ್ಷಣಾ ಬಜೆಟ್ ಗಾತ್ರದ ಹೆಚ್ಚಳದಿಂದಾಗಿ ಅದು ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಹಣ ವ್ಯಯಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನಪಡೆದಂತಾಗಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದು, ಈ ದೇಶ ರಕ್ಷಣೆಗೆಂದು ವಾರ್ಷಿಕ 534 ಬಿಲಿಯನ್ (53400 ಕೋಟಿ) ಡಾಲರ್ ಮೀಸಲಿರಿಸಿದೆ. ಇನ್ನು ಭಾರತ ಕೂಡ ಈ ಪಟ್ಟಿಯಲ್ಲಿ ಹಿಂದೆ ಬಿದ್ದಿಲ್ಲ. ಭಾರತ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಸುಮಾರು 35.6 ಬಿಲಿಯನ್ (3560 ಕೋಟಿ) ಡಾಲರ್ ಮೀಸಲಿರಿಸಿದೆ.
Advertisement