

ವಾಶಿಂಗ್ಟನ್: ಅಮೇರಿಕಾ ಅಧ್ಯಕ್ಷೀಯ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ಸೂಚಿಸಿದ್ದ 'ಟ್ರಂಪ್ ೨೦೧೬ಕ್ಕೆ ಭಾರತೀಯ ಅಮೆರಿಕನ್ನರು" ಗುಂಪಿನಿದ, ಪ್ರಖ್ಯಾತ ಭಾರತೀಯ-ಅಮೇರಿಕಾ ವೈದ್ಯ ಮತ್ತು ಪ್ರಕಾಶಕ ಸುಧೀರ್ ಪಾರಿಕ್ ಹೊರಬಂದಿದ್ದಾರೆ.
"ಆ ಗುಂಪಿನಲ್ಲಿ ನನ್ನ ಕೆಲವರು ಗೆಳೆಯರು ಇದ್ದಿದ್ದರಿಂದ ಅಲ್ಲಿ ಗುರುತಿಸಿಕೊಂಡಿದ್ದೆ. ನಾನು ಡೊನಾಲ್ಡ್ ಟ್ರಂಪ್ ಅವರ ಸ್ಪರ್ಧೆಯನ್ನು ಬೆಂಬಲಿಸುವುದಿಲ್ಲ ಮತ್ತು ಆ ಗುಂಪಿನ ಜೊತೆಗೆ ನನ್ನ ಯಾವುದೇ ಸಂಬಂಧ ಇಲ್ಲ" ಎಂದು ಯಾವುದೇ ಕಾರಣ ನೀಡದೆ ಪಾರಿಕ್ ಜಾಗತಿಕ ಮಾಧ್ಯಮ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಾರಿಕ್ ತಿಳಿಸಿದ್ದಾರೆ.
"ಮೂರು ದಶಕಗಳಿಂದ ಅಭ್ಯರ್ಥಿಯ ವೈಯಕ್ತಿಕ ಗುಣಗಳನ್ನು ಮತ್ತು ಭಾರತೀಯ ಅಮೆರಿಕನ್ನರ ಬಗೆಗೆ ಅವರ ಬದ್ಧತೆಯ ಅನುಸಾರವಾಗಿ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದಿದ್ದೇನೆ" ಎಂದು ಅವರು ಬರೆದಿದ್ದಾರೆ.
"ನಾನು ಇದಕ್ಕೆ ಮುಂದೆಯೂ ಬದ್ಧನಾಗಿರುತ್ತೇನೆ" ಎಂದಿದ್ದಾರೆ ಪಾರಿಕ್. ಜನವರಿಯಲ್ಲಿ ರೂಪುಗೊಂಡಿದ್ದ 'ಟ್ರಂಪ್ ೨೦೧೬ಕ್ಕೆ ಭಾರತೀಯ ಅಮೆರಿಕನ್ನರು' ಗುಂಪಿನಲ್ಲಿ ಧನಸಂಗ್ರಹದ ಸಮಿತಿಯ ಮುಖ್ಯಸ್ಥನ ಜವಾಬ್ದಾರಿಯನ್ನು ಪಾರಿಕ್ ಅವರಿಗೆ ವಹಿಸಲಾಗಿತ್ತು.
ಅಮೆರಿಕಾಗೆ ಅತ್ಯುತ್ತಮ ಭರವಸೆ ಎಂದು ಬಣ್ಣಿಸಿದ್ದ ನ್ಯೂಯಾರ್ಕ್ ಮೂಲದ ಈ ಗುಂಪು, ಚುನಾವಣೆಗೆ ಧನಸಂಗ್ರಹಕ್ಕಾಗಿ ಕಾರ್ಯಕ್ರಮ ರೂಪಿಸಿತ್ತು. ಈ ಗುಂಪಿನ ಅಧ್ಯಕ್ಷ ಸೆಟನ್ ಹಾಲ್ ವಿಶ್ವವಿದ್ಯಾಲಯದ ವಾಣಿಜ್ಯ ಪ್ರಾಧ್ಯಾಪಕ ಡಾ. ಎ ಡಿ ಅಮರ್.