ಬರೋಬ್ಬರಿ 95 ವರ್ಷಗಳ ನಂತರ ಪತ್ತೆಯಾಯ್ತು ನೌಕಾಪಡೆ ಹಡಗು

95 ವರ್ಷಗಳ ಹಿಂದೆ 56 ಪ್ರಯಾಣಿಕರ ಜತೆ ಕಾಣೆಯಾಗಿದ್ದ ಅಮೆರಿಕದ ನೌಕಾಪಡೆಯ ಹಡಗನ್ನು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪತ್ತೆಹಚ್ಚುವ ಮೂಲಕ ಅಮೆರಿಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಾಷಿಂಗ್ಟನ್‌ :  95 ವರ್ಷಗಳ ಹಿಂದೆ 56 ಪ್ರಯಾಣಿಕರ ಜತೆ ಕಾಣೆಯಾಗಿದ್ದ ಅಮೆರಿಕದ ನೌಕಾಪಡೆಯ ಹಡಗನ್ನು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪತ್ತೆಹಚ್ಚುವ ಮೂಲಕ ಅಮೆರಿಕ ನೌಕಾಪಡೆಯು ಇತಿಹಾಸ ನಿರ್ಮಿಸಿದೆ.

1921ರ ಮಾರ್ಚ್‌ 25ರಂದು ಸ್ಯಾನ್‌ ಫ್ರಾನ್ಸಿಸ್ಕೊದಿಂದ ಹವಾಯಿ ದ್ವೀಪದ ಪರ್ಲ್‌ ಹಾರ್ಬರ್‌ ಬಂದರಿಗೆ ತೆರಳಿದ್ದ ನೌಕಾಪಡೆಯ ಕನೆಸ್ಟೊಗ ಟಗ್‌ ಹಡಗು  ನಾಪತ್ತೆಯಾಗಿತ್ತು ಎಂದು ನೌಕಾಪಡೆ ಹಾಗೂ ರಾಷ್ಟ್ರೀಯ ಸಾಗರ ಹವಾಮಾನ ಇಲಾಖೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

95 ವರ್ಷಗಳ ನಂತರ ಹಡಗು ಪತ್ತೆಯಾಗಿದ್ದು ಅಚ್ಚರಿಯ ಸಂಗತಿ ಎಂದು ರಾಷ್ಟ್ರೀಯ ಸಾಗರ ಹವಾಮಾನ ಇಲಾಖೆಯ ಉಪ ಕಾರ್ಯದರ್ಶಿ ಮಾನ್ಸನ್‌ ಬ್ರೌನ್‌ ತಿಳಿಸಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ 30 ನಾಟಿಕಲ್‌ ಮೈಲು ದೂರದಲ್ಲಿರುವ ಫಾರಲೊನ್‌ ದ್ವೀಪದ ಬಳಿಯ ಸಮುದ್ರದ 59 ಮೀಟರ್‌ (189 ಅಡಿ) ಆಳದಲ್ಲಿ ಹಡಗು ಇರುವುದಾಗಿ 2009ರಲ್ಲಿಯೇ ತಜ್ಞರು ಪತ್ತೆ ಹಚ್ಚಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com