ಎನ್ ಎಸ್ ಜಿಯಿಂದ ಭಾರತವನ್ನು ದೂರವಿಡುವ ಯಾವುದೇ ಉದ್ದೇಶ ಹೊಂದಿಲ್ಲ: ಚೀನಾ

ಭಾರತವನ್ನು ಪರಮಾಣು ಪೂರೈಕೆದಾರರ ಸಮೂಹದಿಂದ ದೂರವಿಡುವ ಯಾಪುದೇ ಉದ್ದೇಶ ಹೊಂದಿಲ್ಲ ಎಂದು ಚೀನಾ ಹೇಳಿದೆ...
ಚೀನಾದ ವಿದೇಶಾಂಗ ಇಲಾಖೆಯ ಉಪ ಸಚಿವ ಲಿಯು ಜೆನ್ ಮಿನ್ (ಸಂಗ್ರಹ ಚಿತ್ರ)
ಚೀನಾದ ವಿದೇಶಾಂಗ ಇಲಾಖೆಯ ಉಪ ಸಚಿವ ಲಿಯು ಜೆನ್ ಮಿನ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಭಾರತವನ್ನು ಪರಮಾಣು ಪೂರೈಕೆದಾರರ ಸಮೂಹದಿಂದ ದೂರವಿಡುವ ಯಾಪುದೇ ಉದ್ದೇಶ ಹೊಂದಿಲ್ಲ ಎಂದು ಚೀನಾ ಹೇಳಿದೆ.

ಪಾಕಿಸ್ತಾನದ ಜೊತೆಗೂಡಿ ಭಾರತವನ್ನು ಎನ್ ಎಸ್ ಜಿ ಸಮೂಹದಿಂದ ಹೊರಗಿಡುವ ಚೀನಾದ ಕುತಂತ್ರ ಯೋಜನೆ ಬಯಲಾಗುತ್ತಿದ್ದಂತೆಯೇ ಪ್ರಕರಣಕ್ಕೆ ತೇಪೆ ಹಚ್ಚಲು ಮುಂದಾಗಿರುವ  ಚೀನಾ, ಅಂತಹ ಯಾವುದೇ ಉದ್ದೇಶವನ್ನೂ ತಾನು ಹೊಂದಿಲ್ಲ ಎಂದು ಹೇಳಿದೆ. ಬುಧವಾರ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವ ಚೀನಾದ ವಿದೇಶಾಂಗ ಉಪ  ಸಚಿವ ಲಿಯು ಜೆನ್ ಮಿನ್ ಅವರು, ಮಾಧ್ಯಮಗಳಲ್ಲಿ ಪ್ರಕಟವಾದಂತೆ ನಾವು ಭಾರತವನ್ನು ಎನ್ ಎಸ್ ಜಿ.ಯಿಂದ ದೂರವಿಡುವ ಯಾವುದೇ ಪ್ರಯತ್ನ ಮಾಡಿಲ್ಲ. ಈ ವಿಚಾರ ಸಂಬಂಧಪಟ್ಟ  ವ್ಯಕ್ತಿಗಳೊಂದಿಗೆ ಪರ್ಯಾವಲೊಚನೆ ಮಾಡಬೇಕು ಎಂದು ಹೇಳಿದರು.

"ಎನ್ ಎಸ್ ಜಿ ಸದಸ್ಯತ್ವ ವಿವಾದಕ್ಕೆ ಸಾಕಷ್ಟು ಹಿನ್ನಲೆ ಇದ್ದು, ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಎನ್ ಪಿಟಿ ಸದಸ್ಯರ ನಡುವೆಯೇ ಈ ವಿವಾದ ಬಗೆಹರಿಯಬೇಕಿದೆ. ಎನ್ ಎಸ್  ಜಿ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲ್ಲಿದ್ದು, ನಾವೂ ಕೂಡ ಭಾರತದ ಸಹೋದ್ಯೋಗಿಗಳೊಂದಿಗೆ ಈ ಸಮಸ್ಯೆ ನಿವಾರಣೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.  ಒಂದು ಸ್ನೇಹಿತ ರಾಷ್ಟ್ರವಾಗಿ ಚೀನಾ ಅಂತಾರಾಷ್ಟ್ರೀಯವಾಗಿ ಎಲ್ಲ ಸಮಸ್ಯೆಗಳ ಕುರಿತು ಭಾರತದೊಂದಿಗೆ ಉತ್ತಮ ಸಹಕಾರ ಬಯಸುತ್ತದೆ ಎಂದು ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಜೆನ್  ಮಿನ್ ದೆಹಲಿಯಲ್ಲಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದ ಚೀನಾ ಭಾರತವನ್ನು ಎನ್ ಎಸ್ ಜಿಯಿಂದ ದೂರವಿಡಲು ತನ್ನ ವೆಟೋ ಅಧಿಕಾರ ಬಳಕೆಗೆ ರಹಸ್ಯ ಕಾರ್ಯಯೋಜನೆ ಸಿದ್ಧಪಡಿಸಿರುವ  ಕುರಿತು ಸುದ್ದಿಗಳು ಪ್ರಕಟವಾಗುತ್ತಿದ್ದಂತೆಯೇ ವಿಶ್ವಸಮುದಾಯದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಮೆರಿಕ ಕೂಡ ಭಾರತದ ಬೆನ್ನಿಗೆ ನಿಂತು ಎನ್ ಎಸ್ ಜಿ ಸಮೂಹ ಸೇರಲು ಭಾರತ  ಸಮರ್ಥವಾಗಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಚೀನಾ ವಿದೇಶಾಂಗ ಉಪ ಸಚಿವರು ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com