ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ತಾಲಿಬಾನ್ ಉಗ್ರ ಸಂಘಟನೆ ಮುಖಂಡ ಮನ್ಸೂರ್ ಬಲಿ?

ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಉಗ್ರ ಸಂಘಟನೆ ಮುಖಂಡ ಮುಲ್ಲಾ ಮನ್ಸೂರ್ ಹತ್ಯೆಯಾಗಿರುವ ಸಾಧ್ಯತೆ ಇದೆ
ಮುಲ್ಲಾ ಮನ್ಸೂರ್
ಮುಲ್ಲಾ ಮನ್ಸೂರ್
Updated on

ವಾಷಿಂಗ್ ಟನ್: ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಉಗ್ರ ಸಂಘಟನೆ ಮುಖಂಡ ಮುಲ್ಲಾ ಮನ್ಸೂರ್ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. 
ಅಹ್ಮದ್ ವಾಲ್ ನಗರದಲ್ಲಿ ಅಮೆರಿಕ ಸೇನಾಪಡೆ ಶನಿವಾರದಂದು ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ವಾಹನದಲ್ಲಿ ತೆರಳುತ್ತಿದ್ದ ಉಗ್ರ ಮನ್ಸೂರ್ ಹಾಗೂ ಆತನ ಸಹಚರ ಸಾವನ್ನಪ್ಪಿರುವ ಸಾಧ್ಯತೆ ಇದೆ, ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾನವ ರಹಿತ ಯುದ್ಧ ವಿಮಾನಗಳ ಮೂಲಕ ವೈಮಾನಿಕ ದಾಳಿ ನಡೆಸಲಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ತಾಲಿಬಾನ್ ಉಗ್ರರ ಸಂಘಟನೆ ಮುಖಂಡ ಮನ್ಸೂರ್ ಅಪ್ಘಾನಿಸ್ತಾನ ಹಾಗೂ ತಾಲಿಬಾನ್ ಉಗ್ರ  ಅಸಂಘಟನೆಯ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಗೆ ಅಡ್ಡಿಯಾಗಿದ್ದ ಈ ಹಿನ್ನೆಲೆಯಲ್ಲಿ ಆತನ ಕ್ಯಾಂಪ್ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com