ಚೀನಾದ ನೂತನ ಟೈಪ್ 001-ಎ ಯುದ್ಧ ನೌಕೆ (ಟ್ವಿಟರ್ ಚಿತ್ರ)
ಚೀನಾದ ನೂತನ ಟೈಪ್ 001-ಎ ಯುದ್ಧ ನೌಕೆ (ಟ್ವಿಟರ್ ಚಿತ್ರ)

ಭಾರತದೊಂದಿಗೆ ಸ್ಪರ್ಧೆಗಿಳಿದ ಚೀನಾ; ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆ ಸಿದ್ಧ!

ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.

ಬೀಜಿಂಗ್: ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ  ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.

ಚೀನಾ ರಾಜಧಾನಿ ಪೂರ್ವ ಬೀಜಿಂಗ್ ನ ಡಲಿಯಾನ್ ದ್ವೀಪದಲ್ಲಿ ನಿರ್ಮಾಣ ಮಾಡಲಾಗುತ್ತಿರುವ "ಟೈಪ್ 001-ಎ" ನೌಕೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಯುದ್ಧ ನೌಕೆಗೆ  ರಾಡಾರ್ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಖಾಸಗಿ ಸುದ್ದಿಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಸಾರ ಮಾಡಿದ್ದು, ಕಳೆದ ವರ್ಷ ಆರಂಭಿಕ ಹಂತದಲ್ಲಿದ್ದ ಯುದ್ಧ ನೌಕೆ  ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದೆ. ಇನ್ನು ಕೆಲವೇ ವಾರಗಳಲ್ಲಿ ಯುದ್ಧ ವಿಮಾನ ಹೊತ್ತೊಯ್ಯಬಲ್ಲ ಈ ನೌಕೆಯನ್ನು ಪರೀಕ್ಷಾರ್ಥ ಚಾಲನೆ ಮಾಡುವ ಸಾಧ್ಯತೆ ಇದೆ  ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಮೂಲಗಳ ಪ್ರಕಾರ ಚೀನಾದ ಮೊಟ್ಟಮೊದಲ ಸ್ವದೇಶಿ ನಿರ್ಮಾಣ ಯುದ್ಧನೌಕೆ ಎಂದು ಹೇಳಲಾಗುತ್ತಿರುವ "ಟೈಪ್ 001-ಎ" ನೌಕೆಯು ಸುಮಾರು 60 ಸಾವಿರ ಟನ್ ತೂಕ ಹೊಂದಿದ್ದು, 36 ಜೆ-15  ಯುದ್ಧ ವಿಮಾನಗಳನ್ನು ಒಳಗೊಂಡಂತೆ 50 ವಿಮಾನಗಳನ್ನು ಏಕಕಾಲದಲ್ಲಿ ಹೊತ್ತಯ್ಯುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಈ ಯುದ್ಧ ನೌಕೆಗೆ ಅತ್ಯಾಧುನಿಕ ಎಲೆಕ್ಟ್ರೋ ಮ್ಯಾಗ್ನೆಟಿಕ್ ಎರ್  ಕ್ರಾಫ್ಟ್ ಲಾಂಚ್ ಸಿಸ್ಟಮ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಇನ್ನು ಚೀನಾ ಸೇನಾ ಮೂಲಗಳ ಪ್ರಕಾರ 2020ರೊಳಗೆ ಈ ಯುದ್ಧ ನೌಕೆಯನ್ನು ಚೀನಾ ಸೇನಾಗೆ ಸೇರ್ಪಡೆಗೊಳಿಲಸಲಾಗುತ್ತದೆ  ಎಂದು ಹೇಳಲಾಗುತ್ತಿದೆ.

ಇದೀಗ ಈ ಯುದ್ಧ ನೌಕೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com