ದಕ್ಷಿಣ ಚೀನಾ ಸಮುದ್ರದ ಮೇಲೆ ಡ್ರೋನ್ ಮೂಲಕ ಚೀನಾದ ಕಣ್ಗಾವಲು!

ಸುಮಾರು 3.5 ಮಿಲಿಯನ್ ಚದರ ಕಿಮೀಯಷ್ಟು ವ್ಯಾಪ್ತಿಯಲ್ಲಿ ಹರಡಿರುವ ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಡ್ರೋನ್ ಮೂಲಕ ಕಣ್ಗಾವಲಿಡಲು ಮುಂದಾಗಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಡ್ರೋನ್ ಮೂಲಕ ಚೀನಾದ ಕಣ್ಗಾವಲು!
ದಕ್ಷಿಣ ಚೀನಾ ಸಮುದ್ರದ ಮೇಲೆ ಡ್ರೋನ್ ಮೂಲಕ ಚೀನಾದ ಕಣ್ಗಾವಲು!
Updated on: 

ಬೀಜಿಂಗ್: ಸುಮಾರು 3.5 ಮಿಲಿಯನ್ ಚದರ ಕಿಮೀಯಷ್ಟು ವ್ಯಾಪ್ತಿಯಲ್ಲಿ ಹರಡಿರುವ ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಡ್ರೋನ್ ಮೂಲಕ ಕಣ್ಗಾವಲಿಡಲು ಮುಂದಾಗಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಡ್ರೋನ್ ಗಳನ್ನು ಹಾರಾಟಕ್ಕೆ ಚೀನಾ ಮುಂದಾಗಿದ್ದು ಚೀನಾ ನಿರ್ಮಿತ ಡ್ರೋನ್ ಗಳು ಜಪಾನ್ ಹಾಗು ಚೀನಾ ಎರಡು ತಮ್ಮದೆಂದು ಕರೆದುಕೊಳ್ಳುವ ಡಿಯೋಯು ದ್ವೀಪದ ಮೇಲೆ ಹಾರಾಟ ನಡೆಸಲಿದೆ ಎಂದು ಚೀನಾದ ಅಧಿಕೃತ ಪ್ರಕಟಣೆ ತಿಳಿಸಿದೆ.

ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿರುವ ಹಲವು ದ್ವೀಪಗಳು ಹಾಗೂ ಬಂಡೆಗಳು ನೀರಿನ ಒಳಗೆ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಈ ಸವಾಲನ್ನು ಎದುರಿಸಲು ಚೀನಾ ಅತಿ ಸಂಕೀರ್ಣವಾಗಿರುವ ರಚನೆಯನ್ನು ತಿಳಿಯಲು ನೆರವಾಗಬಲ್ಲ ಡ್ರೋನ್ ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಟಾಪ್ ಆರ್ ಎಸ್ ಟೆಕ್ನಾಲಜಿ ಕೋ ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಚೀನಾ ವಿನ್ಯಾಸಗೊಳಿಸಿರುವ ZC-5B ನಿರಂತರ 30 ಗಂಟೆವರೆಗೆ 1,400 ಕಿಮೀ ಗರಿಷ್ಠ ದೂರ ಹಾರುವ ಸಾಮರ್ಥ್ಯ ಹೊಂದಿದೆ ಎಂದು ಚೀನಾ ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com