

ವಿಶ್ವಸಂಸ್ಥೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಸೇನೆ ಸೀಮಿತ ದಾಳಿ ನಡೆಸಿರುವ ವಿಚಾರದಲ್ಲಿ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಬೆಂಬಲ ಸಿಗುತ್ತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಹೇಳಿದ್ದಾರೆ.
ಇದೆ ವೇಳೆ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ನಡೆಸಿರುವ ಸೀಮಿತ ದಾಳಿ ವಿಶ್ವಸಂಸ್ಥೆ ಗಮನಿಸಿಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಯೀದ್ ಅಕ್ಬರುದ್ದೀನ್, ಯಾರು ಗಮನಿಸಿದರು ಗಮನಿಸಿಲ್ಲ ಎಂಬ ಆಧಾರದ ಮೇಲೆ ವಾಸ್ತವಾಂಶಗಳು ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸೆ.29 ರಂದು ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಳಿ ನಡೆಸಿದ್ದ ಸೀಮಿತ ದಾಳಿ, ಗಡಿ ನಿಯಂತ್ರಣ ರೇಖೆಯನ್ನು ವೀಕ್ಷಿಸುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ತಂಡದ ಗಮನಕ್ಕೆ ಬಂದಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬನ್ ಕಿ-ಮೂನ್ ಅವರ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಭಾರತ ನಡೆಸಿರುವ ದಾಳಿಯ ಬಗ್ಗೆ ವಿಶ್ವಸಂಸ್ಥೆ ನಿರ್ಧರಿಸಬೇಕು. ನಾನು ಅವರ ಪರವಾಗಿ ಗಮನಿಸಲು ಸಾಧ್ಯವಿಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೇ ಗಮನಿಸಿದರು, ಗಮನಿಸದೇ ಇದ್ದರೂ ಗಮನಿಸಿದರೂ ವಾಸ್ತಾವಾಂಶ ಬದಲಾಗುವುದಿಲ್ಲ, ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ ನಡೆಯುತ್ತಿರುವುದರ ಬಗ್ಗೆ ವಿಶ್ವಸಂಸ್ಥೆಗೆ ಅರಿವಿದೆ ಎಂದು ಸಯೀದ್ ಅಕ್ಬರುದ್ದೀನ್ ಹೇಳಿದ್ದಾರೆ.