ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್: 8 ವರ್ಷದ ವಿದ್ಯಾರ್ಥಿ ಸೇರಿ 3 ಮಂದಿ ಸಾವು

ಅಮೆರಿಕದ ಕ್ಯಾಲಿಫೋರ್ನಿಯಾದ ಎಲಿಮೆಂಟ್ರಿ ಶಾಲೆಯೊಂದರಲ್ಲಿ ಶೂಟೌಟ್ ನಡೆದಿದ್ದು, ಶಕ್ಷಿಕಿ ಮತ್ತು 8 ವರ್ಷದ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೊಳಗಾದ ಶಾಲೆ
ದಾಳಿಗೊಳಗಾದ ಶಾಲೆ
Updated on: 

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಎಲಿಮೆಂಟ್ರಿ ಶಾಲೆಯೊಂದರಲ್ಲಿ ಶೂಟೌಟ್ ನಡೆದಿದ್ದು, ಶಕ್ಷಿಕಿ ಮತ್ತು 8 ವರ್ಷದ ವಿದ್ಯಾರ್ಥಿ ಸೇರಿದಂತೆ ಒಟ್ಟು ಮೂರು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡಿನೋದಲ್ಲಿರುವ ಕೇಜನ್ ಹೈ ಸ್ಕೂಲ್ ನಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ಕಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ  ದಾಳಿ ಮಾಡಿದ ದುಷ್ಕರ್ಮಿ ಶಾಲಾ ಶಿಕ್ಷಕಿಯ ಮಾಜಿ ಪತಿಯಾಗಿದ್ದು, ಈಗ್ಗೆ ಒಂದು ತಿಂಗಳ ಹಿಂದಷ್ಟೇ ಶಿಕ್ಷಕಿ ತಮ್ಮ ಪತಿಯನ್ನು ತೊರೆದಿದ್ದರಂತೆ. ದುಶ್ಚಟಗಳ ದಾಸನಾಗಿದ್ದ ದುಷ್ಕರ್ಮಿ ಈ ಹಿಂದೆ ಹಲವು ಬಾರಿ ಕೌಟುಂಬಿಕ ಕಲಹ  ಮತ್ತು ಪತ್ನಿ ಥಳಿಸಿ ಗೃಹ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದನಂತೆ.

ಇನ್ನು ನಿನ್ನೆ ಪತ್ನಿ ತೊರೆದಿದ್ದರಿಂದ ಆಕ್ರೋಶಗೊಂಡು ಶಾಲೆಯಲ್ಲಿ ದಾಳಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಾಕಷ್ಟು ಬಾರಿ ಶಾಲೆಗ ಆಗಮಿಸಿದ್ದ ದುಷ್ಕರ್ಮಿ ನಿನ್ನೆಯೂ ಸಾಮಾನ್ಯದಂತೆಯೇ ಶಾಲೆಗೆ ಆಗಮಿಸಿದ್ದ.  ಶಾಲೆಯ ತರಗತಿಯಲ್ಲಿ ಪತ್ನಿಯನ್ನು ಕಂಡು ತನ್ನ ಬಳಿ ಇದ್ದ ಗನ್ ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ. ಪರಿಣಾಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪತ್ನಿ ಮತ್ತು ಇತರೆ ಇಬ್ಬರು ಸಾವಿಗೀಡಾಗಿದ್ದಾರೆ. ಅಂತೆಯೇ ಓರ್ವ  ವಿದ್ಯಾರ್ಥಿಗೂ ಗುಂಡು ತಗುಲಿದ್ದು, ಇತರೆ ಮೂರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com