
ವಾಷಿಂಗ್ಟನ್: ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ವಿವಾದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿರುವ ದೊಡ್ಡಣ್ಣ ಅಮೆರಿಕ ಚೀನಾ ಮಾತುಕತೆ ಮೂಲಕ ಮಾತ್ರವೇ ಸಮಸ್ಯೆ ಬಗಹೆರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಹೀದರ್ ನೌರ್ಟ್ ಅವರು, ಭಾರತ ಮತ್ತು ಚೀನಾ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅಮೆರಿಕ ಭಾರತ ಮತ್ತು ಚೀನಾ ಎರಡೂ ದೇಶಗಳೊಂದಿಗೂ ವಾಣಿಜ್ಯ ಮತ್ತು ಸೌಹಾರ್ಧ ಸಂಬಂಧ ಹೊಂದಿದೆ. ಮುಖ್ಯವಾಗಿ ಚೀನಾ ಮಾತುಕತೆ ಮೂಲಕವೇ ಭಾರತದೊಂದಿಗಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದರಿಂದ ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ಹೇಳಿದ್ದಾರೆ.
ಈ ಹಿಂದಷ್ಟೇ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ನಕಾರಾ ವ್ಯಕ್ತಪಡಿಸಿತ್ತು. ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡು ಕುರಿತಾದ ಮಾಧ್ಯಮವರದಿಗಳನ್ನು ತಳ್ಳಿ ಹಾಕಿದ್ದ ಚೀನಾ, ಗಡಿ ವಿತಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಮೊದಲು ಭಾರತ ತನ್ನ ಸೇನೆಯನ್ನು ಬೇಷರತ್ತಾಗಿ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಚೀನಿ ಸೈನಿಕರು ಹಿಂದಡಿ ಇಡುವುದಿಲ್ಲ ಎಂದು ಚೀನಾ ಸರ್ಕಾರ ಸ್ಪಷ್ಟ ಪಡಿಸಿತ್ತು.
Advertisement