ಭಾರತ-ಚೀನಾ ನಡುವೆ ಸಹಕಾರಕ್ಕೆ ಸಾಕಷ್ಟು ಅವಕಾಶಗಳಿವೆ: ಚೀನಾ ವಿದೇಶಾಂಗ ಸಚಿವ

ಎಷ್ಯಾದ ಎರಡು ದೊಡ್ಡ ಶಕ್ತಿಗಳಾಗಿರುವ ಚೀನಾ ಹಾಗೂ ಭಾರತದ ರಾಷ್ಟ್ರಗಳ ನಡುವೆ ಸಹಕಾರಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಚೀನಾ ಬುಧವಾರ ಹೇಳಿದೆ...
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
ಬೀಜಿಂಗ್: ಎಷ್ಯಾದ ಎರಡು ದೊಡ್ಡ ಶಕ್ತಿಗಳಾಗಿರುವ ಚೀನಾ ಹಾಗೂ ಭಾರತದ ರಾಷ್ಟ್ರಗಳ ನಡುವೆ ಸಹಕಾರಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಚೀನಾ ಬುಧವಾರ ಹೇಳಿದೆ. 
9ನೇ ಬ್ರಿಕ್ಸ್ ಸಮಾವೇಶ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾಗೆ ದೇಶಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಭಾರತ ಹಾಗೂ ಚೀನಾ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟುಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಂಡು ಪರಸ್ಪರ ಗೌರವಗಳೊಂದಿಗೆ ಮುನ್ನಡೆಯುವುದು ಸದ್ಯದ ಅಗತ್ಯವಾಗಿದೆ ಎಂದು ಹೇಳಿದ್ದಾರೆ. 
ವಿವಾದ ಹಾಗೂ ಸಮಸ್ಯೆಯನ್ನು ಸೂಕ್ತ ರೀತಿಯ ವೇದಿಕೆಯಲ್ಲಿಟ್ಟು, ಉಭಯ ರಾಷ್ಟ್ರಗಳು ಪರಸ್ಪರ ಗೌರವ ಹಾಗೂ ಉಭಯ ನಾಯಕ ಒಮ್ಮತದ ಆಧಾರದ ಮೇಲೆ ವಿವಾದವನ್ನು ಉತ್ತಮ ರೀತಿಯಲ್ಲಿ ನಿಂಯತ್ರಿಸಿ ನಿರ್ಧಾರಗಳನ್ನು ಕೈಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಚೀನಾ ರಾಷ್ಟ್ರಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಉಭಯ ರಾಷ್ಟ್ರಗಳ ಸಹಕಾರ ಕುರಿತಂತೆ ಪ್ರಸ್ತಾಪ ಮಾಡಿರುವ ಅವರು ಭಾರತ ಹಾಗೂ ಚೀನಾ ರಾಷ್ಟ್ರಗಳ ನಡುವೆ ಸಹಕಾರಕ್ಕೆ ಹೆಚ್ಚಿನ ಅವಕಾಶವಿದೆ ಎಂದಿದ್ದಾರೆ. 
ಈ ನಡುವೆ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿದ್ದರೂ ಡೋಕ್ಲಾಮ್ ಗಡಿಯಲ್ಲಿ ಭದ್ರತಾ ಪಡೆಗಳು ಗಸ್ತು ತಿರುಗುತ್ತಿರುತ್ತವೆ ಎಂದು ಚೀನಾ ಹೇಳಿಕೊಂಡಿದೆ. ಈ ಹಿಂದೆ ಹೇಳಿಕೆ ನೀಡಿದ್ದ ವಾಂಗ್ ಯಿ ಅವರು ಡೋಕ್ಲಾಮ್ ಗಡಿ ಬಿಕ್ಕಟ್ಟು ಭಾರತಕ್ಕೆ ಒಂದು ಪಾಠ ಎಂದು ಹೇಳಿದ್ದರು. 
ಸೆಪ್ಟಂಬರ್ 3 ರಿಂದ 5 ವರೆಗೆ ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾಗೆ ತೆರಳಲಿದ್ದಾರೆ. ಫುಜಿಯಾನ್ ಪ್ರಾಂತ್ಯದ ಕ್ಲಿಯಾಮೆನ್ ನಗರದಲ್ಲಿ ಈ ಬ್ರಿಕ್ಸ್ ಸಮಾವೇಶ ನಡೆಯಲಿದೆ. 
ಸುಧೀರ್ಘ 2 ತಿಂಗಳಿಗೂ ಅಧಿಕ ಕಾಲ ನಡೆದ ಭಾರತ-ಚೀನೀ ಸೈನಿಕರ ಸಂಘರ್ಷಕ್ಕೆ ಉಭಯ ದೇಶಗಳ ಸರ್ಕಾರಗಳು ದಿನಗಳ ಹಿಂದಷ್ಟೇ ತಾರ್ಕಿಕ ಅಂತ್ಯ ನೀಡಿತ್ತು. 
ಈ ಹಿಂದೆ ಲಡಾಖ್ ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಹಲ್ಲೆ ಮಾಡಿತ್ತಲ್ಲದೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವು ಸೈನಿಕರು ಗಾಯಗೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ವಿಶ್ವ ಸಮುದಾಯ ಸಮಸ್ಯೆ ಸಂಧಾನದ ಮೂಲಕ ಸಮಸ್ಯೆ  ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದವು. ಬಳಿಕ ಭಾರತ ಸರ್ಕಾರ ರಾಜತಾಂತ್ರಿಕ ಮಾರ್ಗ ಮೂಲಕವೇ ವಿವಾದವನ್ನು ಬಗೆಹರಿಸಲು ಯತ್ನ ನಡೆಸಿತ್ತು. ಈ ಯತ್ನ ಯಶಸ್ಸು ಕಂಡಿತ್ತು. ಉಭಯ ರಾಷ್ಟ್ರಗಳು ಏಕಕಾಲದಲ್ಲಿ ವಿವಾದಿತ ಗಡಿ ಪ್ರದೇಶದಿಂದ ತಮ್ಮ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com