ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: 6.6ರಷ್ಟು ತೀವ್ರತೆ ದಾಖಲು

ಪಾಕಿಸ್ದಾನದ ಬಲೂಚಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕರಾಚಿ: ಪಾಕಿಸ್ದಾನದ ಬಲೂಚಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿದೆ.

ಬೆಳಿಗಿನ ಜಾವ  3.3ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಬಲೂಚಿಸ್ತಾನದ ಪಾಸ್ನಿ, ತುರ್ಬಾತ್, ಗ್ವದಾರ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿರುವುದಾಗಿ ವರದಿಗಳು ತಿಳಿಸಿವೆ.

ಭೂಕಂಪದ ಕೇಂದ್ರ ಬಿಂದು ನೈಋತ್ಯ ಪಾಕಿಸ್ತಾನದಿಂದ 23 ಕಿ.ಮೀ ದೂರದಲ್ಲಿರುವ ಪಾಸ್ನಿ ಎಂಬ ನಗರದಲ್ಲಿ ಕಂಡು ಬಂದಿದೆ ಎಂದು ಯುಎಸ್ ಭೂ ಸರ್ವೇಕ್ಷಣ ವಿಭಾಗ ಹೇಳಿದೆ.

ಭೂಕಂಪದಿಂದ ಯಾವುದೇ ಸಾವು ನೋವುಗಳು ಸಂಭವಿಸಿರುವ ಕುರಿತಂತೆ ವರದಿಗಳಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com