ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಕುರಿತು ಸುಳಿವು ನೀಡಿದ ಚೀನಾ

ಸಿಕ್ಕಿಂ ನ ಡೊಕ್ಲಾಂ ಗಡಿ ವಿವಾದ ಮುಂದುವರೆದಿರುವಂತೆಯೇ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕುರಿತು ಚೀನಾ ಸೋಮವಾರ ಸುಳಿವು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಸಿಕ್ಕಿಂ ನ ಡೊಕ್ಲಾಂ ಗಡಿ ವಿವಾದ ಮುಂದುವರೆದಿರುವಂತೆಯೇ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕುರಿತು ಚೀನಾ ಸೋಮವಾರ ಸುಳಿವು ನೀಡಿದೆ.

ಸಿಕ್ಕಿಂ ಡೊಕ್ಲಾಮ್ ಗಡಿಯಲ್ಲಿ ಸೈನಿಕರ ನಡುವಿನ ಗಲಾಟೆ ಬಳಿಕ ಸ್ಥಗಿತವಾಗಿದ್ದ ದ್ವಿಪಕ್ಷೀಯ ಮಾತುಕತೆಗೆ ಚೀನಾ ಕೊನೆಗೂ ಒಲವು ತೋರಿಸಿದ್ದು, ಈ ವಾರಾಂತ್ಯದಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ  ಸಲಹೆಗಾರರ ಸಮಾವೇಶದ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಿ ವಿದೇಶಾಂಗ  ಕೌನ್ಸಿಲರ್ ಯಾಂಗ್ ಜಿಯೆಚಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಚೀನಾ ಹೇಳಿದೆ.

ಈ ಬಗ್ಗೆ ಚೀನಾದ ವಿದೇಶಾಂಗ ವಕ್ತಾರ ಲು ಕಾಂಗ್ ಸುದ್ದಿಗೋಷ್ಠಿಯಲ್ಲಿ ಸುಳಿವು ನೀಡಿದ್ದು, ಯಾಂಗ್ ಹಾಗೂ ಧೋವಲ್ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು  ಉತ್ತರಿಸಿದರು. ಈ ವೇಳೆ "ಧೋವಲ್ ಹಾಗೂ ಯಾಂಗ್ ನಡುವೆ ಮಾತುಕತೆ ನಡೆಯುವುದನ್ನು ದೃಢಪಡಿಸಲು ಸಾಧ್ಯವಿಲ್ಲವಾದರೂ, ಈ ಹಿಂದೆ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಭೆ ನಡೆದ ಸಂದರ್ಭದಲ್ಲಿಯೂ  ದ್ವಿಪಕ್ಷೀಯ ಮಾತುಕತೆಗಳು ನಡೆದಿದ್ದವು ಎಂದು ಹೇಳಿದ್ದಾರೆ.

ಬ್ರಿಕ್ಸ್ ಎನ್‌ಎಸ್‌ಎ ಅಧಿಕಾರಿಗಳ ಸಮಾವೇಶ ಇದೇ ಜುಲೈ 27 ಹಾಗೂ 28ರಂದು ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com