ಲಂಡನ್ ಅಗ್ನಿ ಅವಘಡ: 10ನೇ ಮಹಡಿಯಿಂದ ಎಸೆದ ಮಗುವನ್ನು ಹಿಡಿದ ಕೆಳಗಿದ್ದ ವ್ಯಕ್ತಿ

ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ವೇಳೆ 9 ಅಥವಾ 10ನೇ ಮಹಡಿಯ ಕಿಟಕಿಯಿಂದ ಎಸೆದ ...
ಲಂಡನ್ ಟವರ್
ಲಂಡನ್ ಟವರ್
ಲಂಡನ್: ಲಂಡನ್ ನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ವೇಳೆ 9 ಅಥವಾ 10ನೇ ಮಹಡಿಯ ಕಿಟಕಿಯಿಂದ ಎಸೆದ ಮಗುವನ್ನು ಕೆಳಗಿದ್ದ ವ್ಯಕ್ತಿಯೊಬ್ಬರು ಹಿಡಿದು ರಕ್ಷಿಸಿದ ಘಟನೆ ನಡೆದಿದೆ.
24 ಮಹಡಿಯ ಕಟ್ಟಡಕ್ಕೆ ಬೆಂಕಿ ಆವರಿಸಿದ್ದರಿಂದ ಆತಂಕಗೊಂಡ ಮಹಿಳೆಯೊಬ್ಬರು ತನ್ನ ಮಗುವನ್ನು 9 ಅಥವಾ 10ನೇ ಮಹಡಿಯಿಂದ ಕೆಳಗೆ ನಿಂತಿದ್ದ ಸಾರ್ವಜನಿಕರತ್ತ ಎಸೆಯುತ್ತಿರುವುದನ್ನು ನಾನು ನೋಡಿದೆ ಎಂದು ಪ್ರತ್ಯಕ್ಷದರ್ಶಿ ಸಮಿರಾ ಲಮ್ರಾನಿ ಅವರು ಹೇಳಿರುವುದಾಗಿ ದಿ ಟೆಲೆಗ್ರಾಫ್ ವರದಿ ಮಾಡಿದೆ.
ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಹುಮಹಡಿ ಕಟ್ಟದ ನಿವಾಸಿಗಳು ಕಿಟಕಿಯ ಮೂಲಕ ರಕ್ಷಣೆಗಾಗಿ ಮೊರೆಯಿಡುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ತನ್ನ ಮಗುವನ್ನು ಯಾರಾದರೂ ರಕ್ಷಿಸುತ್ತಾರೆ ಎಂಬ ವಿಶ್ವಾಸದಿಂದ ಎಸೆಯುತ್ತಾರೆ. ಕೂಡಲೇ ಕೆಳಗಿದ್ದ ವ್ಯಕ್ತಿಯೊಬ್ಬರು ಮುಂದೆ ಓಡಿ ಹೋಗಿ ಮಗುವನ್ನು ರಕ್ಷಿಸುತ್ತಾರೆ  ಎಂದು ಸಮಿರಾ ಹೇಳಿದ್ದಾರೆ.
ಲಂಡನ್ನಿನ ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಅಪಾರ್ಟ್ ಮೆಂಟ್ ನಲ್ಲಿ ನಿನ್ನೆ ತಡರಾತ್ರಿ ಅಗ್ನಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಅಪಾರ್ಟ್ ಮೆಂಟ್ ನ 24 ಅಂತಸ್ತಿನ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಈ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 120 ಮನೆಗಳಿದ್ದು, ಅಗ್ನಿ ಅವಘಡದಲ್ಲಿ 6 ಮಂದಿ ಸಜೀವ ದಹನವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com