ತಾನು ಗೂಢಚಾರಿಕೆ ನಡೆಸುತ್ತಿದ್ದ ಇಸಿಸ್ ಉಗ್ರನನ್ನೇ ವರಿಸಿದ ಎಫ್ ಬಿಐ ಮಹಿಳಾ ಅಧಿಕಾರಿ!

ಇಸ್ಲಾಮಿಕ್ ಉಗ್ರ ಸಂಘಟನೆ ವಿರುದ್ಧ ಗೂಢಚಾರಿಕೆ ನಡೆಸಲೆಂದು ಅಮೆರಿಕ ಸರ್ಕಾರ ನಿಯೋಜಿಸಿದ್ದ ಮಹಿಳಾ ಎಫ್ ಬಿಐ ಅಧಿಕಾರಿಯೊಬ್ಬರು ಇಸಿಸ್ ಉಗ್ರಗಾಮಿಯನ್ನೇ ವಿವಾಹವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಇಸ್ಲಾಮಿಕ್ ಉಗ್ರ ಸಂಘಟನೆ ವಿರುದ್ಧ ಗೂಢಚಾರಿಕೆ ನಡೆಸಲೆಂದು ಅಮೆರಿಕ ಸರ್ಕಾರ ನಿಯೋಜಿಸಿದ್ದ ಮಹಿಳಾ ಎಫ್ ಬಿಐ ಅಧಿಕಾರಿಯೊಬ್ಬರು ಇಸಿಸ್ ಉಗ್ರಗಾಮಿಯನ್ನೇ ವಿವಾಹವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಮೆರಿಕದ ಎಫ್ ಬಿಐ ಅಧಿಕಾರಿ ಡೇನಿಯಲ್ ಗ್ರೀನೆ ಎಂಬುವವರು ಟರ್ಕಿಯಲ್ಲಿ ಜರ್ಮನ್ ಮೂಲದ ಡೆನಿಸ್ ಕಸ್ಪರ್ಟ್ ಎಂಬ ಉಗ್ರಗಾಮಿಯನ್ನು ವಿವಾಹವಾಗಿದ್ದಾರಂತೆ. ಡೆನಿಸ್ ಕಸ್ಪರ್ಟ್ ಕುಖ್ಯಾತ ಉಗ್ರಗಾಮಿಯಾಗಿದ್ದು, 2015ರಲ್ಲಿ  ಉಗ್ರ ಸಂಘಟನೆ ಸೇರಿದ್ದ ಕಸ್ಪರ್ಟ್ ಟರ್ಕಿ ಮತ್ತು ಸಿರಿಯಾದಲ್ಲಿ ಸಂಘಟನೆಗೆ ಯುವಕರನ್ನು ಸೇರಿಸುವ ಏಜೆಂಟ್ ಆಗಿದ್ದ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಇನ್ನು ಜೋಕೋಸ್ಲೋವೇಕಿಯಾ ಮೂಲದ ಡೇನಿಯಲ್ ಗ್ರೀನೆ  2011ರಲ್ಲಿ ಎಫ್ ಬಿಐ ಗೆ ಸೇರಿದ್ದರು. ಅಮೆರಿಕ ಸೇನೆಯ ಅಧಿಕಾರಿಯನ್ನೇ ವಿವಾಹವಾಗಿದ್ದ ಗ್ರೀನೆ ಟರ್ಕಿಯಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕುರಿತು ಗೂಢಚಾರಿಕೆ ನಡೆಸುವ ಸಲುವಾಗಿ ನಿಯೋಜನೆಗೊಂಡಿದ್ದರು.  ಬಳಿಕ 2014ರ ಜೂನ್ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.

ಜರ್ಮನಿಯಲ್ಲಿರುವ ತಮ್ಮ ಪೋಷಕರನ್ನು ನೋಡಲು ತೆರಳುತ್ತಿದ್ದಾಗ ಗ್ರೀನೆ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಬಳಿಕ ಮತ್ತೆ ಜೂನ್ 27ರಂದು ಸಿರಿಯಾಗೆ ಆಗಮಿಸಿದ್ದ ಗ್ರೀನೆ ತುರ್ತಾಗಿ ಉಗ್ರಗಾಮಿ ಡೆನಿಸ್ ಕಸ್ಪರ್ಟ್  ರನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಈ ವಿಚಾರ ಬೆಳಕಿಗೆ ಬಂದಿದ್ದು, ಗ್ರೀನೆ ವಿವಾಹ ಸುದ್ದಿ ಇದೀಗ ಅಮೆರಿಕದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಂತೆಯೇ ವಿವಾಹದ ಕುರಿತೂ ಸಾಕಷ್ಟು ಶಂಕೆ  ವ್ಯಕ್ತವಾಗುತ್ತಿದ್ದು, ಅಮೆರಿಕ ತನಿಖಾ ಸಂಸ್ಥೆ ಎಫ್ ಬಿಐ ಇದೀಗ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com