ವಿಶ್ವ ವ್ಯಾಪಾರ ಕೇಂದ್ರ ಸ್ಮಾರಕದ ಬಳಿ ಉಗ್ರನೋರ್ವ ನಡೆಸಿದ ಟ್ರಂಕ್ ದಾಳಿಯಲ್ಲಿ 8 ಮಂದಿ ಸಾವಿಗೀಡಾಗಿ 11 ಮಂದಿ ಗಂಭೀರವಾಗಿ ಗಾಯಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ , ಅಮಾಯಕರ ಮೇಲಿನ ಉಗ್ರರ ದಾಳಿ ಹೇಡಿತನದ್ದು. ಉಗ್ರ ದಾಳಿ ಸಂತ್ರಸ್ಥರೊಂದಿಗೆ ತಾವಿದ್ದು, ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.