ಮಾಂಸ ಜಾಹೀರಾತಿನಲ್ಲಿ ಗಣೇಶ: ಆಸ್ಟ್ರೇಲಿಯಾ ಕಂಪನಿ ವಿರುದ್ಧ ಅಧಿಕೃತ ದೂರು ದಾಖಲಿಸಿದ ಭಾರತ

ಹಿಂದೂಗಳ ಆರಾಧ್ಯ ದೈವ ಗಣೇಶನನ್ನು ಬಳಸಿಕೊಂಡು ಮಾಂಸ ಜಾಹೀರಾತು ನಿರ್ಮಿಸಿರುವ ಆಸ್ಟ್ರೇಲಿಯಾ ಕಂಪನಿ ವಿರುದ್ಧ ಭಾರತ ಅಧಿಕೃತವಾಗಿ ದೂರು ದಾಖಲು ಮಾಡಿದೆ ಎಂದು ತಿಳಿದುಬಂದಿದೆ...
ಮಾಂಸ ಜಾಹೀರಾತಿನಲ್ಲಿ ಗಣೇಶ
ಮಾಂಸ ಜಾಹೀರಾತಿನಲ್ಲಿ ಗಣೇಶ
ಸಿಡ್ನಿ: ಹಿಂದೂಗಳ ಆರಾಧ್ಯ ದೈವ ಗಣೇಶನನ್ನು ಬಳಸಿಕೊಂಡು ಮಾಂಸ ಜಾಹೀರಾತು ನಿರ್ಮಿಸಿರುವ ಆಸ್ಟ್ರೇಲಿಯಾ ಕಂಪನಿ ವಿರುದ್ಧ ಭಾರತ ಅಧಿಕೃತವಾಗಿ ದೂರು ದಾಖಲು ಮಾಡಿದೆ ಎಂದು ತಿಳಿದುಬಂದಿದೆ. 
ಆಸ್ಪ್ರೇಲಿಯಾದ ಮೀಟ್ ಆ್ಯಂಡ್ ಲಿವ್ ಸ್ಟಾಕ್ (ಎಂಎಲ್ಎ) ಕಂಪನಿ ಕೆಲ ದಿನಗಳ ಹಿಂದಷ್ಟೇ ಮಾಂಸ ಜಾಹೀರಾತೊಂದನ್ನು ನಿರ್ಮಿಸಿತ್ತು. ಜಾಹೀರಾತಿನಲ್ಲಿ ಭಗವಾನ್ ಗಣೇಶ ಸೇರಿದಂತೆ ಇತರೆ ದೇವರುಗಳು ಮಾಂಸಾಹಾರ ಸೇವಿಸುತ್ತಿರುವುದು ಕಂಡು ಬಂದಿತ್ತು. ಈ ಜಾಹೀರಾತಿಗೆ ಭಾರೀ ಆಕ್ರೋಶಗಳು ವ್ಯಕ್ತವಾಗತೊಡಗಿದ್ದವು. 
ಮಾಂಸ ಜಾಹೀರಾತಿನಲ್ಲಿ ಗಣೇಶನನ್ನು ಬಳಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ಕಂಪನಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದಿರುವ ಆಸ್ಟ್ರೇಲಿಯಾದಲ್ಲಿರುವ ಹಿಂದೂ ಸಮುದಾಯಗಳು ಜಾಹೀರಾತನ್ನು ಖಂಡಿಸಿದೆ. 
ಜಾಹೀರಾತು ಕುರಿತಂತೆ ಇದೀಗ ಆಸ್ಟ್ರೇಲಿಯಾ ಸರ್ಕಾರದ ಗಮನಕ್ಕೆ ತರಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕ್ಯಾನ್ ಬೆರಾದ ಭಾರತೀಯ ರಾಯಭಾರಿಗೆ ತಿಳಿಸಲಾಗಿದೆ. ಅಲ್ಲದೆ, ಸಿಡ್ನಿ ರಾಯಭಾರ ಕಚೇರಿ ಸಹ ಕೂಡಲೇ ಜಾಹೀರಾತನ್ನು ಹಿಂಪಡೆಯುವಂತೆ ಜಾಹೀರಾತು ಕಂಪನಿಗೆ ಒತ್ತಾಯಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com