200 ಮಂದಿ ಪ್ರಯಾಣಿಸುತ್ತಿದ್ದ ಅಲ್ಗೇರಿಯಾ ಸೇನಾ ವಿಮಾನ ಪತನ

200 ಮಂದಿ ಪ್ರಯಾಣಿಸುತ್ತಿದ್ದ ಅಲ್ಗೇರಿಯಾದ ಸೇನಾ ವಿಮಾನ ಪತನವಾಗಿದ್ದು ಹಲವರು ಸಾವಿಗೀಡಾಗಿರುವ ಸಾಧ್ಯತೆ ಇದೆ....
ವಿಮಾನ ಪತನ
ವಿಮಾನ ಪತನ
ಅಲ್ಜಿರಿಯಾ: 200 ಮಂದಿ ಪ್ರಯಾಣಿಸುತ್ತಿದ್ದ ಅಲ್ಗೇರಿಯಾದ ಸೇನಾ ವಿಮಾನ ಪತನವಾಗಿದ್ದು ಹಲವರು ಸಾವಿಗೀಡಾಗಿರುವ ಸಾಧ್ಯತೆ ಇದೆ. 
ಅಲ್ಜಿರಿಯಾದ ಬೌಫರಿಕ್ ಸೇನಾ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ನಡೆಸಿದೆ. ಈ ವಿಮಾನ ಅಲ್ಗೇರಿಯಾದ ವಾಯುಸೇನೆಯದಾಗಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದ್ದು ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. 
ಮಾಧ್ಯಮಗಳ ವರದಿ ಪ್ರಕಾರ ಸದ್ಯ 14 ಆ್ಯಂಬುಲೆನ್ಸ್ ಗಳು ಘಟನಾ ಸ್ಥಳಕ್ಕೆ ತೆರಳಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಸದ್ಯ ಸಾವಿನ ಸಂಖ್ಯೆ ಖಚಿತವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com