ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು: ಚೀನಾ ಎಚ್ಚರಿಕೆ

ಮಾಲ್ಡೀವ್ಸ್‌ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್‌: ಮಾಲ್ಡೀವ್ಸ್‌ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವ ಚೀನಾ ಇಂಡೋ-ಚೀನಾ ಸಂಬಂಧಕ್ಕೆ ಮಾಲ್ಡೀವ್ಸ್ ವಿಚಾರದಿಂದ ತೊಂದರೆಯಾಗಬಾರದು ಎಂದು ಹೇಳಿದೆ.
ಈ ಬಗ್ಗೆ ಈ ಹಿಂದೆ ನೇರವಾಗಿ ಭಾರತಕ್ಕೆ ಕಿವಿಮಾತು ಹೇಳಿದ್ದ ಚೀನಾ ಸರ್ಕಾರ ಇದೀಗ ತನ್ನ ಮಾಧ್ಯಮಗಳನ್ನು ಭಾರತದ ವಿರುದ್ಧ ಛೂ ಬಿಟ್ಟಿದ್ದು ಮಾಲ್ಡೀವ್ಸ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚೀನಾ ಮಾಧ್ಯಮಗಳು ಭಾರತದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿರುವ ಚೀನಾ ಮಾಧ್ಯಮಗಳು ಒಂದು ವೇಳೆ ಭಾರತ ದೇಶ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ಮಾಲ್ಡೀವ್ಸ್ ಗೆ ಸೇನೆ ರವಾನೆ ಮಾಡಿದರೆ, ಭಾರತದ ವಿರುದ್ಧ  ಚೀನಾ ನಿರ್ಧಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ. ಅಂತೆಯೇ ಮಾಲ್ಡೀವ್ಸ್ ಗೆ ಭಾರತೀಯ ಸೇನೆ ರವಾನೆ ಮಾಡುವ ಕುರಿತು ಚೀನಾ ವಿರೋಧವಿದ್ದು, ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗೆಯನ್ನು ಒಪ್ಪಲು  ಸಾಧ್ಯವಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.
ಮಾಲ್ಡೀವ್ಸ್ ಬಿಕ್ಕಟ್ಟು ಚೀನಾದ ಆಂತರಿಕ ವಿಚಾರವಾಗಿದ್ದು, ಯಾವುದೇ ಕಾರಣಕ್ಕೆ ಭಾರತ ಮಧ್ಯ ಪ್ರವೇಶ ಮಾಡಬಾರದು. ಒಂದು ವೇಳೆ ಭಾರತ ದುಸ್ಸಾಹಸಕ್ಕೆ ಮುಂದಾದರೆ ತನ್ನ ಪ್ರಾದೇಶಿಕ  ಸಮಗ್ರತೆ ಕಾಪಾಡಿಕೊಳ್ಳಲು ಚೀನಾ  ಯಾವುದೇ ರೀತಿಯ ಕಠಿಣ ನಿರ್ಣಯ ಕೈಗೊಳ್ಳುಲು ಸ್ವತಂತ್ರವಾಗಿದೆ. ಮಾಲೆಯಿಂದ ಭಾರತವನ್ನು ತಡೆಯಲು ಚೀನಾ ಯಾವುದೇ ರೀತಿಯ ಕ್ರಮ ಜರುಗಿಸಬಹುದು ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಅಂತೆಯೇ ಮಾಲ್ಡೀವ್ಸ್ ಮತ್ತೊಂದು ಡೊಕ್ಲಾಮ್ ಸಮಸ್ಯೆಯಾಗುವುದು ಬೇಡ. ಈ ಬಗ್ಗೆ ಭಾರತ ಎಚ್ಚರಿಕೆಯ ನಡೆ ಇಡಲಿ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಈ ಹಿಂದೆ ಚೀನಾ ಸರ್ಕಾರ ಕೂಡ ಮಾಲ್ಡೀವ್ಸ್ ವಿಚಾರದಲ್ಲಿ ಭಾರತ ಮಧ್ಯ ಪ್ರವೇಶ ಮಾಡುವುದು ಬೇಡ ಎಂದು ಹೇಳಿತ್ತು. ಭಾರತ ಜತೆ ಮತ್ತೊಂದು ಮುಸುಕಿನ ಗುದ್ದಾಟಕ್ಕೆ ಮಾಲ್ಡೀವ್ಸ್ ಬಿಕ್ಕಟ್ಟು ಕಾರಣವಾಗುವುದು ಬೇಡ ಎಂದು  ಹೇಳಿದ್ದ ಚೀನಾ,  ಈ ವಿಷಯದಲ್ಲಿ ಯಾವುದೇ ಬಾಹ್ಯ ಮಧ್ಯಸ್ಥಿಕೆ ಬೇಡ ಎನಿಸುತ್ತದೆ. ಈ ವಿಷಯವನ್ನು ಮಾತುಕತೆಯ ಮೂಲಕವೇ ಸರಿಪಡಿಸಬೇಕು ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com