ಹವಮಾನ ಬದಲಾವಣೆ ಒಪ್ಪಂದದಿಂದ ಅಮೆರಿಕಾಗೆ ನಷ್ಟ, ಭಾರತ, ಚೀನಾಗೆ ಲಾಭ: ಡೊನಾಲ್ಡ್ ಟ್ರಂಪ್ ವಾದ

ಹವಾಮಾನ ಬದಲಾವಣೆ ಕುರಿತ ತಮ್ಮ ನೀತಿಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ....
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ ತಮ್ಮ ನೀತಿಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಚೀನಾದ ಹೆಸರನ್ನು ಪ್ರಸ್ತಾಪಿಸಿದೆ. ಈ ದೇಶಗಳು ಮತ್ತು ಇನ್ನು ಕೆಲ ದೇಶಗಳು ಪ್ಯಾರಿಸ್ ಒಪ್ಪಂದದಿಂದ ಲಾಭ ಪಡೆದುಕೊಂಡಿದ್ದರೆ ಅಮೆರಿಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.

ಪ್ಯಾರಿಸ್ ಹವಾಮಾನ ಒಪ್ಪಂದದಿಂದ ನಾವು ಹೊರಬಂದಿದ್ದೇವೆ. ಅದು ನಮಗೆ ವಿಪತ್ತು ಆಗಿದೆ ಎಂದು ಡೊನಾಲ್ಡ್ ಟ್ರಂಪ್ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಮಿಟಿಯನ್ನುದ್ದೇಶಿಸಿ ಹೇಳಿದ್ದಾರೆ.

ಹವಾಮಾನ ಬದಲಾವಣೆ ಒಪ್ಪಂದದಿಂದ ಕಳೆದ ವರ್ಷ ಹಿಂದೆ ಸರಿಯುವ ನಿರ್ಧಾರವನ್ನು ಮಾಡಿದ್ದರ ಬಗ್ಗೆ ಅವರು ವಿವರಿಸಿದರು.

ಹವಮಾನ ಬದಲಾವಣೆ ಬಗ್ಗೆ ಮಾಡಿಕೊಂಡ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಕಳೆದ ಜೂನ್ ನಲ್ಲಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಹಿಂದಿನ ಬರಾಕ್ ಒಬಾಮಾ ಸರ್ಕಾರದಲ್ಲಿ 190 ದೇಶಗಳು ಮಾಡಿಕೊಂಡಿದ್ದ ಒಪ್ಪಂದವನ್ನು ಮರು ಸಂಧಾನ ಮಾಡಬೇಕೆಂದು ಟ್ರಂಪ್ ಒತ್ತಾಯಿಸಿದ್ದಾರೆ.

ಹವಾಮಾನ ಬದಲಾವಣೆ ಕುರಿತು ಮಾಡಿಕೊಂಡಿರುವ ಒಪ್ಪಂದದಲ್ಲಿ ಅಮೆರಿಕಾಕ್ಕೆ ಅನ್ಯಾಯವಾಗಿದೆ. ಇದರಿಂದ ದೇಶದ ಉದ್ಯಮ ಮತ್ತು ಉದ್ಯೋಗ ವಲಯಕ್ಕೆ ತೊಂದರೆಯಾಗಿದೆ ಎಂದು ಹೇಳಿರುವ ಅವರು ಭಾರತ, ಚೀನಾದಂತಹ ದೇಶಗಳಿಗೆ ಇದರಿಂದ ಅನೇಕ ಲಾಭಗಳಿವೆ ಎಂದಿದ್ದಾರೆ.

ಇಂದು ತಂತ್ರಜ್ಞಾನ ಬಹಳ ಮುಂದುವರಿದಿದೆ. ನಮ್ಮಲ್ಲಿ ತೈಲ, ಕಲ್ಲಿದ್ದಲು ಸಂಪನ್ಮೂಲ ಹೇರಳವಾಗಿದೆ. ಹವಾಮಾನ ಮಾಲಿನ್ಯ ನೆಪದಲ್ಲಿ ಅವುಗಳನ್ನು ಬಳಸಬಾರದು ಎಂದರೆ ಬೇರೆ ದೇಶಗಳ ಜೊತೆ ನಮಗೆ ಸ್ಪರ್ಧೆಯೊಡ್ಡಲು ಸಾಧ್ಯವಾಗುವುದಿಲ್ಲ. ಇದು ಆಗಬಾರದು ಎಂಬುದು ಟ್ರಂಪ್ ವಾದ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com