ಈ ಹೇಳಿಕೆ ಕುರಿತಂತೆ ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಮುಷರಫ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನು ಜಾಗತಿಕವಾಗಿ ನಿಯಂತ್ರಿಸುತ್ತಿದ್ದು, ಇದರಿಂದ ಇಸ್ಲಾಮಾಬಾದ್ ವಿದೇಶಾಂಗ ನೀತಿ ಹಾಳಾಗುವಂತಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಂದು ಪಾಕಿಸ್ತಾನಕ್ಕೆ ಗೌರವ ಇದೆಯೇ ನೀವೇ ಹೇಳಿ ಎಂದು ಸುದ್ದಿ ಮಾಧ್ಯಮವನ್ನು ಪ್ರಶ್ನಿಸಿದ್ದಾರೆ.