ಭಾರತದ ಮೇಲೆ ಕಣ್ಗಾವಲು; ಪಾಕಿಸ್ತಾನದ 2 ಗೂಢಚಾರಿಕಾ ಸ್ಯಾಟೆಲೈಟ್ ಉಡಾವಣೆ ಮಾಡಿದ ಚೀನಾ

ಭಾರತದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳು ರಹಸ್ಯವಾಗಿ ತಮ್ಮ ಎರಡು ಗೂಢಚಾರಿಕಾ ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಉಪಗ್ರಹ ಉಡಾವಣೆ ಮಾಡಿದ ಚೀನಾ
ಪಾಕಿಸ್ತಾನ ಉಪಗ್ರಹ ಉಡಾವಣೆ ಮಾಡಿದ ಚೀನಾ
ಬೀಜಿಂಗ್: ಭಾರತದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳು ರಹಸ್ಯವಾಗಿ ತಮ್ಮ ಎರಡು ಗೂಢಚಾರಿಕಾ ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ರಿಮೋಟ್ ಸೆನ್ಸಿಂಗ್ ಉಪಗ್ರಹ (ಪಿಆರ್ ಎಸ್ ಎಸ್-1) ಉಪಗ್ರಹ ಮತ್ತು ಪಾಕ್ ಟೆಸ್-1ಎ ಉಪಗ್ರಹಗಳನ್ನು ವಾಯುವ್ಯ ಚೀನಾದ ಜಿಗಾನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. 
ಬಾಹ್ಯಾಕಾಶ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಮುಂದಿದ್ದು, ಚೀನಾ ಮತ್ತು ಪಾಕಿಸ್ತಾನ ದೇಶಗಳ ಜಂಟಿ ಕಾರ್ಯಾಚರಣೆ ಪಾಕಿಸ್ತಾನಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅವಕಾಶದ ಬಾಗಿಲು ತೆರೆದಂತಾಗಿದೆ. 
2011ರಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವಿನ ಬಾಹ್ಯಾಕಾಶ ಸಹಕಾರ ಒಪ್ಪಂದ 2011ರಲ್ಲಿ ಆರಂಭವಾಗಿತ್ತು. 2011ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನ ಪಾಕ್ ಸ್ಯಾಟ್ 1ಆರ್ ಉಪಗ್ರಹವನ್ನು ಚೀನಾ ಉಡಾವಣೆ ಮಾಡುವ ಮಾಡಿತ್ತು. 
ಇನ್ನು ಇಂದು ಉಡಾವಣೆಯಾದ ಪಾಕ್ ಟೆಸ್ 1ಎ ಉಪಗ್ರಹವನ್ನು ಪಾಕಿಸ್ತಾನ ನಿರ್ಮಾಣ ಮಾಡಿದ್ದು, ಪಿಎಪ್ ಎಸ್ ಎಸ್ 1 ಉಪಗ್ರಹವನ್ನು ಚೀನಾ ನಿರ್ಮಾಣ ಮಾಡಿ ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು. ಚೀನಾದ ಸಿಎಎಸ್ ಟಿ ಈ ಉಪಗ್ರಹವನ್ನು ನಿರ್ಮಾಣ ಮಾಡಿತ್ತು.
ಈ ಎರಡೂ ಉಪಗ್ರಹಗಳನ್ನು ಚೀನಾದ ಯಶಸ್ವೀ ಉಪಗ್ರಹ ಉಡಾವಣಾ ವಾಹಕ ಲಾಂಗ್ ಮಾರ್ಚ್ 2 ಸಿ ರಾಕೆಟ್ ಹೊತ್ತು ಸಾಗಿದೆ. 
ಚೀನಾ ಮೂಲಗಳ ಪ್ರಕಾರ ಪಿಆರ್ ಎಸ್ ಎಸ್ ಉಪಗ್ರಹವನ್ನು ಭೂ ಕಕ್ಷೆ ಸರ್ವೇಕ್ಷಣೆ, ನೈಸರ್ಗಿಕ ವಿಕೋಪ, ಕೃಷಿ ಸಂಶೋಧನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ ಪಾಕಿಸ್ತಾನ ಮತ್ತು ಚೀನಾ ಗಡಿಗಳ ಮೇಲೂ ಈ ಉಪಗ್ರಹ ನಿಗಾ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಗಡಿಭಾಗದ ಪ್ರದೇಶಗಳ ಮೇಲೆ ಕಣ್ಣಿಡಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com