ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದಲ್ಲಿ ಐತಿಹಾಸಿಕ ಹೆಚ್ಚಳ; 2017ರಲ್ಲಿ 84.44 ಬಿಲಿಯನ್ ಡಾಲರ್

ಭಾರತ ಹಾಗೂ ಚೀನಾ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಐತಿಹಾಸಿಕ ಹೆಚ್ಚಳವಾಗಿದೆ. 2017ರಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ವಹಿವಾಟು 84.44 ಬಿಲಿಯನ್ ಡಾಲರ್ ತಲುಪಿದೆ.
ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದಲ್ಲಿ ಐತಿಹಾಸಿಕ ಹೆಚ್ಚಳ; 2017ರಲ್ಲಿ 84.44 ಬಿಲಿಯನ್ ಡಾಲರ್
ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದಲ್ಲಿ ಐತಿಹಾಸಿಕ ಹೆಚ್ಚಳ; 2017ರಲ್ಲಿ 84.44 ಬಿಲಿಯನ್ ಡಾಲರ್
ಬೀಜಿಂಗ್: ಭಾರತ ಹಾಗೂ ಚೀನಾ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಐತಿಹಾಸಿಕ ಹೆಚ್ಚಳವಾಗಿದೆ. 2017ರಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ವಹಿವಾಟು 84.44 ಬಿಲಿಯನ್ ಡಾಲರ್  ತಲುಪಿದೆ.
ಇದೇ ಮೊದಲ ಬಾರಿಗೆ ಭಾರತ ಹಾಗೂ ಚೀನಾ ನಡುವಿನ ವಹಿವಾಟು 80 ಮಿಲಿಯನ್ ಡಾಲರ್ ತಲುಪಿದ್ದು ಇದಕ್ಕೂ ಹಿಂದೆ 2016ರಲ್ಲಿ ಈ ಪ್ರಮಾಣವು  71.18 ಬಿಲಿಯನ್‌ ಅಮೆರಿಕನ್‌ ಡಾಲರ್‌ ಆಗಿತ್ತು.
ವಿಶೇಷವೆಂದರೆ ಕಳೆದ ವರ್ಷ ಭಾರತ ಹಾಗೂ ಚೀನಾ ನಡುವೆ ಉಂಟಾಗಿದ್ದ ಡೋಕ್ಲಾಮ್‌ ಬಿಕ್ಕಟ್ಟುಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಅಲ್ಲದೆ ಭಾರತ ಚೀನಾ ನಡುವಿನ ಆರ್ಥಿಕ ಕಾರಿಡಾರ್ ಯೋಜನೆ ಸಂಬಂಧ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಚೀನಾ ವಿರೋಧಿಸಿತ್ತು. ಪರಮಾಣು ಪೂರೈಕೆ ಗುಂಪಿಗೂ ಭಾರತ ಸೇರ್ಪಡೆಗೆ ಚೀನಾ ವಿರೋಧವಿತ್ತು. 
ಇಷ್ಟೆಲ್ಲದರ ಹೊರತಾಗಿಯೂ ಮೇಲಿನ ಯಾವ ಸಮಸ್ಯೆಗಳು ಎರಡು ರಾಷ್ಟ್ರಗಳ ವ್ಯಾಪಾರ ಸಂಬಂಧದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಎರಡೂ ರಾಷ್ಟ್ರಗಳ ವ್ಯಾಪಾರ ವೃದ್ಧಿಗಾಗಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದ್ದು ಇದೇ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಪ್ರವಾಸವೂ ಇದೆ. ಕ್ವಿಂಗ್ಡೊದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದು ಈ ಭೇಟಿ ದ್ವಿಪಕ್ಷೀಯ ವಹಿವಾಟಿಗೆ ಇನ್ನಷ್ಟು ಪುಷ್ಟಿ ಒದಗಿಸಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com