ಮ್ಯಾಡ್ರಿಡ್: ವೇತನ ತಾರತಮ್ಯ, ಮುಂದುವರೆದ ಭೇದಭಾವ ಮತ್ತು ಪುರುಷರ ಹಿಂಸಾಚಾರ ಖಂಡಿಸಿ ಸ್ಪೇನ್ ನಲ್ಲಿ ಗುರುವಾರ ನಡೆದ ಮೊದಲ ಸ್ತ್ರೀವಾದಿ ಬೃಹತ್ ಪ್ರತಿಭಟನೆ ವಿಶ್ವ ಮಹಿಳಾ ದಿನಕ್ಕೆ ಸಾಕ್ಷಿಯಾಗಿದ್ದು, ಈ ಮುಷ್ಕರದಲ್ಲಿ ಸ್ಪೇನಾದ್ಯಂತ ಸುಮಾರು 5 ದಶಲಕ್ಷ ಮಹಿಳೆಯರು ಭಾಗವಹಿಸಿದ್ದರು.
ದೇಶಾದ್ಯಂತ ನಡೆದ ಮೊದಲ ಸ್ತ್ರೀವಾದಿ ಮುಷ್ಕರದಲ್ಲಿ ನಗರ ಹಾಗೂ ಪಟ್ಟಣಗಳಿಂದ 5.3 ದಶಲಕ್ಷ ಮಹಿಳೆಯರು ಭಾಗವಹಿಸಿದ್ದರು ಎಂದು ಕಾರ್ಮಿಕ ಸಾಮಾನ್ಯ ಸಂಘ ಮತ್ತು ಕಾರ್ಮಿಕರ ಆಯೋಗ ವರದಿ ಮಾಡಿದೆ.
ಸ್ಪೇನ್ ನಲ್ಲಿ ಮಹಿಳೆಯರು ಪುರುಷರಿಗಿಂತ ಸರಾಸರಿ ಶೇ.22.9ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ ಮತ್ತು 2003ರಿಂದ ಇದುವರೆಗೆ ಗೃಹ ಹಿಂಸೆಯಲ್ಲಿ 924 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಇದನ್ನು ಖಂಡಿಸಿ ಇಂದು ಸ್ಪೇನ್ ಮಹಿಳೆಯರು ಬೀಗಿಗಿಳಿದು ಪ್ರತಿಭಟನೆ ಮಾಡಿದರು.
ಜಗತ್ತಿನಾದ್ಯಂತ ಸ್ಪೇನ್ ಮಹಿಳೆಯರ ಈ ಪ್ರತಿಭಟನೆಯನ್ನು ಸ್ತ್ರೀವಾದಿ ಹೋರಾಟ ಎಂದು ಕರೆದಿದ್ದು, ಮುಷ್ಕರ ಮುಂದುವರೆದಿದೆ.