ಯುಗೋವ್ ಪೋಲ್(YouGov poll) ಇತ್ತೀಚೆಗಷ್ಟೇ ನಡೆಸಿದ ಸಮೀಕ್ಷೆಯ ಪ್ರಕಾರ, ಬ್ರಿಟನ್ ಪ್ರಜೆಗಳಿಗೆ ಭಾರತೀಯರೇ ಅತ್ಯಂತ ನೆಚ್ಚಿನ ವಲಸಿಗರಾಗಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಏಷ್ಯಾ ಸಮುದಾಯಗಳ ಪೈಕಿ ಪಾಕಿಸ್ತಾನಿಯರು, ಬಾಂಗ್ಲಾದೇಶದವರಿಗಿಂತ ಭಾರತೀಯರ ಬಗ್ಗೆಯೇ ಬ್ರಿಟನ್ ಪ್ರಜೆಗಳಿಗೆ ಹೆಚ್ಚಿನ ಒಲವಿದೆ ಎಂಬುದು ಸಮೀಕ್ಷೆ ಮೂಲಕ ದೃಢಪಟ್ಟಿದೆ.