ಸಂಗ್ರಹ ಚಿತ್ರ
ವಿದೇಶ
ಭಾರತ ನಮ್ಮ ಎಫ್ 16 ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ ಒತ್ತಡ
ಭಾರತ ದೇಶ ರಷ್ಯಾವಲ್ಲದೇ ನಮ್ಮ ದೇಶದ ಯುದ್ಧ ವಿಮಾನ ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದರೆ ದಿಗ್ಬಂಧನ ಹೇರುವುದಿಲ್ಲ ಎಂಬ ಪರೋಕ್ಷ ಒತ್ತಡವನ್ನು ಭಾರತದ ಮೇಲೆ ಅಮೆರಿಕ ಹಾಕುತ್ತಿದೆ.
ವಾಷಿಂಗ್ಟನ್: ಭಾರತ ದೇಶ ರಷ್ಯಾವಲ್ಲದೇ ನಮ್ಮ ದೇಶದ ಯುದ್ಧ ವಿಮಾನ ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದರೆ ದಿಗ್ಬಂಧನ ಹೇರುವುದಿಲ್ಲ ಎಂಬ ಪರೋಕ್ಷ ಒತ್ತಡವನ್ನು ಭಾರತದ ಮೇಲೆ ಅಮೆರಿಕ ಹಾಕುತ್ತಿದೆ.
ಭಾರತದ ಮೇಲೆ ವಿಧಿಸಲಿರುವ ಕಾಟ್ಸಾ ಕಾಯ್ದೆಯ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಬೇಕು ಎಂಬ ಪರೋಕ್ಷ ಒತ್ತಡವನ್ನು ಅಮೆರಿಕ ಹೇರುತ್ತಿದೆ. ಈ ಸಂಬಂಧ ಭಾರತಕ್ಕೆ ಅನೌಪಚಾರಿಕವಾಗಿ ಸೂಚನೆ ನೀಡಿರುವ ಅಮೆರಿಕ, ಒಂದು ವೇಳೆ ಅಮೆರಿಕದ ಯುದ್ಧ ವಿಮಾನ ಖರೀದಿಸಿದ್ದೇ ಆದಲ್ಲಿ ನಿಮ್ಮ ಮೇಲೆ ಹೇರಬೇಕೆಂದಿರುವ ದಿಗ್ಬಂಧನ ಮನ್ನಾ ಮಾಡುತ್ತೇವೆ ಎಂದಿದೆ.
ಇನ್ನು ಭಾರತ ಅಮೆರಿಕದ ಈ ಒತ್ತಡಕ್ಕೆ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅಂತೆಯೇ ಒಪ್ಪಿಗೆ ಕೂಡ ನೀಡಿಲ್ಲ.
ಭಾರತ, ರಷ್ಯಾದಿಂದ ಅತ್ಯಾಧುನಿಕ ಎಸ್-400 ಪ್ರತಿರೋಧಕ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದು, ಇದು ಅಮೆರಿಕದ ಕಣ್ಣು ಕೆಂಪಾಗಿಸಿದೆ. ಸದ್ಯ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಜತೆ ಜಗತ್ತಿನ ಯಾವುದೇ ದೇಶಗಳೂ ಶಸ್ತ್ರಾಸ್ತ್ರ ಖರೀದಿ ಮಾಡಬಾರದು ಎಂದು ಅಮೆರಿಕ ನಿಯಮ ರೂಪಿಸಿದೆ. ಇದನ್ನು ಉಲ್ಲಂಘಿಸಿರುವ ಭಾರತ, ರಷ್ಯಾದಿಂದ ಪ್ರತಿರೋಧಕ ಕ್ಷಿಪಣಿಗಳ ಖರೀದಿಗೆ ಮುಂದಾಗಿದೆ. ಡಿಸೆಂಬರ್ ನಲ್ಲಿ ಅಮೆರಿಕಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅಮೆರಿಕ ಈ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ