ಪತ್ನಿ ಪ್ರಿಯಕರ ಜೊತೆಗೆ ಆಲಿಂಗನ : ಗೊಗಲ್ ಮ್ಯಾಪ್ ನಲ್ಲಿ ನೋಡಿ ವಿಚ್ಚೇದನ ನೀಡಿದ ಪತಿ !

ಪ್ರಿಯಕರ ಜೊತೆಯಲ್ಲಿ ತನ್ನ ಹೆಂಡತಿ ಇರುವುದನ್ನು ಗೂಗಲ್ ನಕ್ಷೆಯಲ್ಲಿ ನೋಡಿದ ಪತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.
2013ರಲ್ಲಿ ಸೆರೆ ಹಿಡಿಯಲಾದ ಪೋಟೋಗಳು
2013ರಲ್ಲಿ ಸೆರೆ ಹಿಡಿಯಲಾದ ಪೋಟೋಗಳು

ಲಿಮಾ : ಪ್ರಿಯಕರ ಜೊತೆಯಲ್ಲಿ ತನ್ನ ಹೆಂಡತಿ ಇರುವುದನ್ನು ಗೂಗಲ್ ನಕ್ಷೆಯಲ್ಲಿ ನೋಡಿದ  ಪತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

ಪೆರು ರಾಜಧಾನಿ ಲಿಮಾದಲ್ಲಿನ ಪ್ರಸಿದ್ಧ  ಸೇತುವೆ ತಲುಪಲು ಉತ್ತಮವಾದ ಮಾರ್ಗವನ್ನು ಹುಡುಕುತ್ತಿದ್ದ ಪೆರುವಿಯನ್ ವ್ಯಕ್ತಿ , ಗೂಗಲ್ ಸ್ಟ್ರೀಟ್ ನಲ್ಲಿ ತನ್ನ ಹೆಂಡತಿ ಪೋಟೋಗಳನ್ನು ನೋಡಿ ಬೆಚ್ಚಿ ಬಿದಿದ್ದ.

ಪಾರ್ಕಿನ  ಬೆಂಚ್ ಮೇಲೆ  ಕುಳಿತಿದ್ದ ಮಹಿಳೆ  ಕಾಲಿನ ಮೇಲೆ ಪುರುಷನೊಬ್ಬ ತಲೆ ಕೊಟ್ಟು ಮಲಗಿರುವ ಚಿತ್ರ ಗೂಗಲ್ ಸ್ಟ್ರೀಟ್ ನಲ್ಲಿ ಕಂಡುಬಂದಿತ್ತು.

2013ರಲ್ಲಿ ಈ ಪೋಟುಗಳನ್ನು ಸೆರೆ ಹಿಡಿಯಲಾಗಿದೆ. ಇದು ಬೆಳಕಿಗೆ ಬರುತ್ತಿದ್ದಂತೆ ಈ ಹಿಂದೆ ಪ್ರೇಮಿಸುತ್ತಿದ್ದಾಗಿ ಆ ಮಹಿಳೆ ಹೇಳಿಕೊಂಡಿದ್ದಾಳೆ. ನಂತರ ಆಕೆಯ ಪತಿ ವಿಚ್ಚೇದನ ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಆ ಪೋಟೋಗಳನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಮಹಿಳೆ ನಿಂಧಿಸಿ ಅಸಂಖ್ಯಾತ ಪ್ರತಿಕ್ರಿಯೆಗಳು ಕಂಡುಬಂದಿವೆ.

ಜಗತ್ತಿನ ಎಲ್ಲ ಸ್ಥಳಗಳನ್ನು ಗೂಗಲ್ ಸ್ಟ್ರೀಟ್ ವ್ಯೂ  ಕ್ಯಾಮರಾಗಳು ಸೆರೆಹಿಡಿಯುತ್ತವೆ. ದಕ್ಷಿಣ ಆಫ್ರಿಕಾದಲ್ಲಿ ಸೈನಿಕರ ರಾಬರಿ ಸೇರಿದಂತೆ ಕೆಲ ತಮಾಷೆಯ ಚಿತ್ರಗಳನ್ನು ಸಹ ಇದು ಸೆರೆ ಹಿಡಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com