ಈ ಬಗ್ಗೆ ಪೆಂಟಗನ್ ನಲ್ಲಿ ನಡೆದ ಮಹತ್ವದ ರಕ್ಷಣಾ ಇಲಾಖೆಯ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅಮೆರಿಕದಿಂದ ಪಾಕಿಸ್ತಾನ ಸರ್ಕಾರಕ್ಕೆ ನೀಡಲಾಗುತ್ತಿದ್ದ 300 ಮಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೆಂಟಗನ್ ವಕ್ತಾರರಾದ ಫಿಲ್ ಸ್ಟೆವಾರ್ಟ್ ಮತ್ತು ಇಡ್ರೀಸ್ ಅವರು, ಉಗ್ರ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರದ ಪ್ರಯತ್ನಗಳು ನಿರಾಶಾದಾಯಕವಾಗಿದೆ. ಈ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಅಮೆರಿಕ ಮನವಿ ಮಾಡಿದ್ದರೂ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ. ಹೀಗಾಗಿ ಟ್ರಂಪ್ ಸರ್ಕಾರ ಅನಿವಾರ್ಯವಾಗಿ ಆರ್ಥಿಕ ಭದ್ರತಾ ನೆರವನ್ನು ರದ್ದುಗೊಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.