ಟ್ಯುಗುರಾವ್: ಭಾರೀ ಚಂಡಮಾರುತ ಮಂಘುತ್ ಭೀಕರ ಹೊಡೆತಕ್ಕೆ ಸಿಕ್ಕು ಉತ್ತರ ಫಿಲಿಫೈನ್ಸ್ ನ ಕನಿಷ್ಠ 12 ಜನರು ಸಾವನ್ನಪ್ಪಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಶನಿವಾರ ಮಂಘುತ್ ಚಂಡಮಾರುತ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದೆ.ಇದರ ಬೀಕರತೆಗೆ ಹೆದರಿ ಅದೆಷ್ಟೋ ಮಂದಿ ಮನೆಯನ್ನೇ ತೊರೆದು ಹೋಗಿದ್ದಾರೆ.
ಲುಝಾನ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದೆಯಲ್ಲದೆ ಮುಂದಿನ ದಿನಗಳಲ್ಲಿ ಈ ಮಾರುತ ಇನ್ನಷ್ಟು ಭೀಕರ ಸ್ವರೂಪ ತಾಳಲಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಂಡಮಾರುತ ಮುನ್ಸೂಚನೆ ಮೊದಲೇ ತಿಳಿದಿದ್ದ ಫಿಲಿಫೈನ್ಸ್ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ್ತ್ತು. ಪರಿಹಾರ ಕಾರ್ಯಾಚರಣೆಗಾಗಿ ಹೆಚ್ಚುವರಿ ರಕ್ಷಣಾ ಸಿಬ್ಬಂದಿ ನೇಮಕವಾಗಿತ್ತು.
ಇನ್ನು ಹಾಂಗ್ ಕಾಂಗ್, ದಕ್ಷಿಣ ಚೀನಾ ಭಾಗಗಳಲ್ಲಿ ಸಹ ಚಂಡಮಾರುತ ಪ್ರಭಾವ ಬೀರಿದೆ.ಇಲ್ಲಿ ಸಹ ಸಾಕಷ್ಟು ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮಂಘುತ್ ಚಂಡಮಾರುತ ಗಂಟೆಗೆ 160 ಕಿ.ಮೀ. ವೇಗದಲ್ಲಿ ಬೀಸುತ್ತಿದೆ ಎಂದು ಮಾದ್ಯಮ ವರದಿಯಲ್ಲಿ ಹೇಳಲಾಗಿದೆ..