ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅಮೆರಿಕ ಸರ್ಕಾರ, ಡೊನಾಲ್ಡ್ ಟ್ರಂಪ್ ಗೆ ಅಮೆರಿಕ ಹಾಗು ವಿದೇಶಗಳಲ್ಲಿ ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದೆ. ಗಣರಾಜ್ಯೋತ್ಸವ ದಿನಾಚರಣೆಯಂದು ನಡೆಯುವ ಸೇನಾ ಮೆರವಣಿಳನ್ನು ಡೊನಾಲ್ಡ್ ಟ್ರಂಪ್ ಇಷ್ಟಪಡುತ್ತಾರೆ, ಅಮೆರಿಕಾದಲ್ಲೂ ಇದೇ ಮಾದರಿಯ ಸೇನಾ ಮೆರವಣಿಗೆ ನಡೆಸಲು ಬಯಸಿದ್ದಾರೆ, ಭಾರತಕ್ಕೆ ಭೇಟಿ ನೀಡುವುದನ್ನು ಟ್ರಂಪ್ ಎದುರು ನೋಡುತ್ತಿದ್ದಾರೆ ಎಂದು ಅಮೆರಿಕ ಸರ್ಕಾರ ಹೇಳಿದೆ.