ಸೌದಿ ರಸ್ತೆ ಅಪಘಾತ: ನಾಲ್ವರು ಭಾರತೀಯರ ಸಾವು

ಸೌದಿ ಅರೇಬಿಯಾದ ತೈಫ್  ಗಿರಿಧಾಮದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೌದಿ ರಸ್ತೆ ಅಪಘಾತ: ನಾಲ್ವರು ಭಾರತೀಯರ ಸಾವು
ಸೌದಿ ರಸ್ತೆ ಅಪಘಾತ: ನಾಲ್ವರು ಭಾರತೀಯರ ಸಾವು
Updated on: 

ಜೆಡ್ಡಾ: ಸೌದಿ ಅರೇಬಿಯಾದ ತೈಫ್  ಗಿರಿಧಾಮದ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
 
ಸೌದಿ ಸರ್ಕಾರಿ ಅಧಿಕಾರಿಗಳ ಪ್ರಕಾರ ಅಲ್ ಸೈಲ್ ಪ್ರದೇಶದಲ್ಲಿ ಬೆಳಿಗ್ಗೆ 0701 ಗಂಟೆಗೆ (ಸ್ಥಳೀಯ ಸಮಯ) ಕಾರ್ಮಿಕರು ಪ್ರಯಾಣಿಸುತ್ತಿದ್ದ ವ್ಯಾನ್, ಕಾರಿಗೆ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ಒಟ್ಟು 19 ಕಾರ್ಮಿಕರು ಗಾಯಗೊಂಡಿದ್ದು, ನಗರದ ಮೂರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ತೈಫ್‌ನ ಭಾರತೀಯ ರಾಯಭಾರ ಕಚೇರಿಯ ಸ್ವಯಂಸೇವಕ ಮೊಹಮ್ಮದ್ ಸೇಲಂ ತಿಳಿಸಿದ್ದಾರೆ.
 
ಮೃತರನ್ನು ಬಿಹಾರಿ ಲಾಲ್ ಶಿವ ಬಾಲಕ್, ಉತ್ತರ ಪ್ರದೇಶದ ಶೌಕತ್ ಅಲಿ, ರಾಜಸ್ಥಾನದ ಘೆವಾರ್ ದಲಿಚನ್ ಮತ್ತು ಮಹಾರಾಷ್ಟ್ರದ ಫಿಡಾ ಹುಸೇನ್ ಕುಲ್ಲು ಸಿದ್ದಿಕಿ ಎಂದು ಗುರುತಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಯ ಹಮ್ನಾ ಮರಿಯಮ್ ಮತ್ತು ಇತರ ಅಧಿಕಾರಿಗಳೊಂದಿಗೆ ಸೌದಿ ಅಧಿಕಾರಿಗಳು ಭಾರತದಲ್ಲಿರುವ ಮೃತರ  ಕುಟುಂಬಗಳನ್ನು ಸಂಪರ್ಕಿಸುವ ಕೆಲಸದಲ್ಲಿ ತೊಡಗಿದದಾರೆ ಎಂದು ಭಾರತೀಯ ದೂತಾವಾಸದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com