ಆ ವೇಳೆ ಹಂತಕ ಅಧಿಕಾರಿ "ನಾನವಳನ್ನು ನೋಡಿಕೊಳ್ಳಬೇಕೆಂದು ನೀವು ಬಯಸುತ್ತೀರಾ?" ಎಂದು ಕೇಳಲಾಗಿ ಲಿಂಗಲ "ಹೌದು" ಎಂದು ಪ್ರತಿಕ್ರಯಿಸಿದ್ದಾನೆ. ಆಗ ರಹಸ್ಯ ಪೋಲೀಸ್ ಅಧಿಕಾರಿ " ನಾನವಳನ್ನು ಕೊಲ್ಲುತ್ತೇನೆ" ಎಂದಾಗ ಈತ ಒಪ್ಪಿಕೊಂಡಿದ್ದಾನೆ. ಹಾಗೂ ಇದುವೇ ಕಥೆಯ ಅಂತ್ಯವೆಂದಿದ್ದಾನೆ. ಸಂಭಾಷಣೆಯ ಸಮಯದಲ್ಲಿ, ಲಿಂಗಾಲಾ ತನ್ನ ಪೂರ್ಣ ಹೆಸರು, ಮನೆ ವಿಳಾಸ, ವಯಸ್ಸು ಮತ್ತು ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಿದ್ದಾನ್ರೆ. ಆತ ತನ್ನ ಮನೆಯ ಪ್ರವೇಶದ್ವಾರ ಮತ್ತು ವಿನ್ಯಾಸವನ್ನು ವಿವರಿಸಿದ್ದ. ಅವಳು ಕೆಲಸ ಮಾಡುವ ಸಂಸ್ಥೆಯ ಹೆಸರು, ಆಕೆಯ ಕೆಲಸಸಮಯ, ವಿವರಗಳನ್ನೂ ನೀಡಿದ್ದ.