ಭಾರತದಿಂದ ಪ್ರಚೋದನೆ ಬಂದಾಗ ಪಾಕಿಸ್ತಾನವು ಎರಡು ಭಾರತೀಯ ಯುದ್ಧವಿಮಾನಗಳನ್ನು ಒಡೆದುರುಳಿಸಿತು. ಆದರೆ, ನಾವು ಯಾವುದೇ ವ್ಯಕ್ತಿ ಹಾಗೂ ಸೇನಾ ಪಡೆಗಳಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದವು. ನಮ್ಮನ್ನು ಪ್ರಚೋದಿಸಿದಾಗ ಸರಿಯಾಗಿ ತಿರುಗೇಟು ಕೊಡುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ನಾವು ತೋರಿಸಬೇಕಿತ್ತು ಅಷ್ಟೇ… ನೀವು ನಮ್ಮ ದೇಶದೊಳಗೆ ಪ್ರವೇಶ ಮಾಡಿದಾಗ ನಾವೂ ಕೂಡ ನಿಮ್ಮ ಗಡಿಯೊಳಗೆ ಬರಬಲ್ಲೆವು. ಪಾಕಿಸ್ತಾನದ ವಾಯು ಪ್ರದೇಶದೊಳಗೆ ಬಂದ 2 ಮಿಗ್ ಯುದ್ಧವಿಮಾನಗಳನ್ನ ನಾವು ಕೆಳಗುರುಳಿಸಿದೆವು. ಆದರೆ, ಇಷ್ಟಾದ ನಂತರ ನಮ್ಮ ಮುಂದಿನ ದಾರಿಗಳೇನು? ನಾವು ಕುಳಿತು ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.