ಆಫ್ಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವುದು ನಾವು, ಭಾರತ ಅಥವಾ ಪಾಕಿಸ್ತಾನವಲ್ಲ: ಡೊನಾಲ್ಡ್ ಟ್ರಂಪ್

ಆಫಅಘಾನಿಸ್ತಾನದಲ್ಲಿ ಮೂಲಭೂತವಾದಿ ಉಗ್ರರ ವಿರುದ್ಧ ಹೋರಾಡುತ್ತಿರುವುದು ಅಮೆರಿಕ.. ಭಾರತ ಅಥವಾ ಪಾಕಿಸ್ತಾನಗಳಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಭೌಗೋಳಿಕವಾಗಿ ಆಫ್ಘಾನ್ ಗೆ ತೀರಾ ಹತ್ತಿರ ಇರುವ ದೇಶಗಳು ಉಗ್ರರ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸುತ್ತಿಲ್ಲ

ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ಮೂಲಭೂತವಾದಿ ಉಗ್ರರ ವಿರುದ್ಧ ಹೋರಾಡುತ್ತಿರುವುದು ಅಮೆರಿಕ.. ಭಾರತ ಅಥವಾ ಪಾಕಿಸ್ತಾನಗಳಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಾರ್ಯಾಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭೌಗೋಳಿಕವಾಗಿ ಆಫ್ಘಾನಿಸ್ತಾನಕ್ಕೆ ತೀರಾ ಹತ್ತಿರ ಇರುವ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ಅಲ್ಲಿನ ಉಗ್ರರ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸುತ್ತಿಲ್ಲ. ಆಫ್ಗಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ವಿರುದ್ಧ ಅಮೆರಿಕ ಮಾತ್ರ ಹೋರಾಟ ನಡೆಸುತ್ತಿದೆ. ಆದರೆ ನೆರೆ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹೇಳಿರುವ ಟ್ರಂಪ್, ಇದಕ್ಕಾಗಿ ತಾಲಿಬಾನ್ ಮೂಲಭೂತವಾದಿಗಳೊಂದಿಗೆ ಶಾಂತಿ ಮಾತುಕತೆ ಕೂಡ ಅನಿವಾರ್ಯ ಎಂದು ಹೇಳಿದೆ. ಅಂತೆಯೇ ಅಮೆರಿಕದೊಂದಿಗೆ ಶೀಘ್ರದಲ್ಲೇ ಭಾರತ, ಇರಾನ್, ರಷ್ಯಾ ಹಾಗೂ ಟರ್ಕಿ ಸಹ ಈ ಹೋರಾಟ ನಡೆಸಬೇಕಾಗುತ್ತದೆ. ತಾಲಿಬಾನಿಗಳನ್ನು ನಿರ್ಮೂಲನೆ ಮಾಡಲು ಬೇರೆ ರಾಷ್ಟ್ರಗಳು ಮುಂದಾಗಲೇಬೇಕು. ಏಕೆಂದರೆ ಅಮೆರಿಕದ ಯೋಧರನ್ನು ಇನ್ನೂ 19 ವರ್ಷ ಅಲ್ಲಿಯೇ ಇರಿಸಲು ನಾವು ಬಯಸುವುದಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

ಯುದ್ಧಪೀಡಿತ ಅಫ್ಗಾನಿಸ್ತಾನದಿಂದ ನಮ್ಮ ಯೋಧರನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡಿಲ್ಲ. ತಾಲಿಬಾನಿಗಳು ಪುನಃ ಅಲ್ಲಿ ಸಕ್ರಿಯರಾಗದಂತೆ ನೋಡಿಕೊಳ್ಳಲು ಬೇರೆಯವರು ಜವಾಬ್ದಾರಿ ವಹಿಸಿಕೊಂಡ ಬಳಿಕ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com