ತಿರುಗೇಟು ನೀಡಿದ ಚೀನಾ, ಅಮೆರಿಕ ವಸ್ತುಗಳ ಮೇಲಿನ ತೆರಿಗೆ ಶೇ.25ರಷ್ಟು ಹೆಚ್ಚಳ

ಚೀನಾ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ವ್ಯಾಪಾರ ಯುದ್ಧ ಆರಂಭಿಸಿದ್ದ ಅಮೆರಿಕಕ್ಕೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕ ಮೂಲದ ವಸ್ತುಗಳ ತೆರಿಗೆಯನ್ನು ಶೇ.20ರಷ್ಟು ಹೆಚ್ಚಳ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಚೀನಾ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ವ್ಯಾಪಾರ ಯುದ್ಧ ಆರಂಭಿಸಿದ್ದ ಅಮೆರಿಕಕ್ಕೆ ಚೀನಾ ತಿರುಗೇಟು ನೀಡಿದ್ದು, ಅಮೆರಿಕ ಮೂಲದ ವಸ್ತುಗಳ ತೆರಿಗೆಯನ್ನು ಶೇ.20ರಷ್ಟು ಹೆಚ್ಚಳ ಮಾಡಿದೆ.
ಈ ಹಿಂದೆ ಚೀನಾ ಮೂಲದ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ತೆರಿಗೆ ಹೆಚ್ಚಳ ಮಾಡಿತ್ತು. ಅಮೆರಿಕ ಸರ್ಕಾರದ ಈ ನಡೆಗೆ ಅದೇ ಧಾಟಿಯಲ್ಲಿ ಉತ್ತರ ನೀಡಿರುವ ಚೀನಾ ಅಮೆರಿದ ಸುಮಾರು 60 ಮಿಲಿಯನ್ ಮೌಲ್ಯದ 5 ಸಾವಿರ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 5ರಿಂದ ಶೇ.25ರಷ್ಟು ಹೆಚ್ಚಳ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಚೀನಾ ಶರಣಾಗಾವುದಿಲ್ಲ. ಅಮೆರಿಕ ಒತ್ತಡ ತಂತ್ರಗಾರಿಕೆ ಮೂಲಕ ತನ್ನ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುತ್ತಿದೆ. ಆದರೆ ನಾವೂ ಅಮೆರಿಕದ ಯಾವುದೇ ನಡೆಗೆ ತಿರುಗೇಟು ನೀಡಲು ಶಕ್ತರಾಗಿದ್ದೇವೆ ಎಂದು ಹೇಳಿದ್ದಾರೆ.
ಅತ್ತ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಮರದ ಬ್ರಿಟನ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಎಫ್ ಟಿಎಸ್ ಇ 100 ಅಂಕ ಕಳೆದುಕೊಂಡು, ಶಾಂಘೈ ಮಾರುಕಟ್ಟೆ ಸೂಚ್ಯಂಕ 1.21 ಅಂಕಗಳ ನಷ್ಟ ಅನುಭವಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com