

ವಾಷಿಂಗ್ಟನ್: ಕೊರೋನಾ ರೌದ್ರನರ್ತನಕ್ಕೆ ಅಮೆರಿಕಾ ಕಂಗಾಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 76,570 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಇನ್ನು ಒಂದೇ ದಿನ ಮಹಾಮಾರಿ ವೈರಸ್ 1,125 ಮಂದಿಯನ್ನು ಬಲಿಪಡೆದುಕೊಂಡಿದ್ದು, ಇದರೊಂದಿಗೆ ಅಮೆರಿಕಾದಲ್ಲಿ ಈ ವರೆಗೂ ಕೊರೋನಾಗೆ 147,333 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕಾದಲ್ಲಿ ಕೊರೋನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದ್ದು, ಈ ವರೆಗೂ ಸೋಂಕಿಗೊಳಗಾದವರ ಸಂಖ್ಯೆ 4 ಲಕ್ಷ ದಾಟಿ, 4,169,991ಕ್ಕೆ ತಲುಪಿದೆ.
4,169,991 ಮಂದಿ ಸೋಂಕಿತರ ಪೈಕಿ 1,979,617 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇನ್ನೂ 2,043,041 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.