ಕೊರೋನಾ ವೈರಸ್'ಗೆ ಬೆಚ್ಚಿಬಿದ್ದ ಇಟಲಿ: 15 ಮಿಲಿಯನ್ ಜನರ ಸಂಚಾರಕ್ಕೆ ನಿರ್ಬಂಧ

ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕೊರನೋನಾ ವೈರಸ್ ಕೇವಲ 16 ದಿನಗಳ ಅಂತರಲ್ಲಿ ಬರೋಬ್ಬರಿ 366 ಮಂದಿಯನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರ ಇಟಲಿ ತನ್ನ ದೇಶದ 15 ಮಿಲಿಯನ್ ಜನರ ಸಂಚಾರಕ್ಕೇ ನಿರ್ಬಂಧ ವಿಧಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

366 ಮಂದಿ ಸಾವಿನ ಬೆನ್ನಲ್ಲೇ ಸರ್ಕಾರದಿಂದ ಹಲವು ಕ್ರಮ: ದೇಶದಾದ್ಯಂತ ಶಾಲೆ, ಚಿತ್ರಮಂದಿರ, ಮ್ಯೂಸಿಯಂ ಬಂದ್


ರೋಮ್: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕೊರನೋನಾ ವೈರಸ್ ಕೇವಲ 16 ದಿನಗಳ ಅಂತರಲ್ಲಿ ಬರೋಬ್ಬರಿ 366 ಮಂದಿಯನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರ ಇಟಲಿ ತನ್ನ ದೇಶದ 15 ಮಿಲಿಯನ್ ಜನರ ಸಂಚಾರಕ್ಕೇ ನಿರ್ಬಂಧ ವಿಧಿಸಿದೆ. 

ಕೊರೋನಾ ವೈರಸ್ ದೇಶದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿರುವ ಚಿತ್ರಮಂದಿರ, ರಂಗಮಂದಿರ, ಮ್ಯೂಸಿಯಂ, ಶಾಲೆ, ನೈಟ್ ಕ್ಲಬ್, ಕ್ಯಾಸಿನೋಗಳನ್ನು ಬಂದ್ ಮಾಡಿಸಿದೆ. 

ಇಡೀ ವಿಶ್ವದಲ್ಲಿ ಕೊರೋನಾ ಬಾಧೆಯಿಂದ ಅತೀ ಹೆಚ್ಚು ನಲುಗಿರುವ ದೇಶಗಳಲ್ಲಿ ಚೀನಾ ಬಳಿಕ ಇಟಲಿಯಿದೆ. ಫೆ.21ರಂದು ಇಟಲಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ವರೆಗೂ ಸೋಂಕಿತರ ಸಂಖ್ಯೆ  1883ಕ್ಕೆ ಏರಿಕೆಯಾಗಿದೆ. 

ಶ್ರೀಮಂತ ಪ್ರದೇಶವಾದ ಉತ್ತರ ಇಟಲಿಯನ್ನು ಕೊರೋನಾ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಲೊಂಬಾರ್ಡಿ ಹಾಗೂ ಅದರ ಸುತ್ತಲಿನ 15 ಪ್ರಾಂತ್ಯಗಳಿಗೆ ಜನರು ಪ್ರವೇಶಿಸುವುದು ಅಥವಾ ಆ ಪ್ರಾಂತ್ಯದೊಳಕ್ಕೆ ಸುತ್ತಾಡುವುದುಕ್ಕೆ ಏ.3ರವರಗೆ ನಿರ್ಬಂಧ ಹೇರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com