

ಲಂಡನ್: ಮಹಾಮಾರಿ ಕೊರೋನಾಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಸೋಂಕಿತರ ಸಂಖ್ಯೆ 48 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ, ಹೆಮ್ಮಾರಿ ವೈರಸ್ 3.23 ಲಕ್ಷ ಮಂದಿ ಬಲಿಪಡೆದುಕೊಂಡಿದೆ.
ಕೊರೋನಾ ಸೋಂಕು ಪ್ರಕರಣಗಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೂವರೆಗೂ 48,97,842 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೆ, 3,23,287 ಮಂದಿ ವೈರಸ್'ಗೆ ಬಲಿಯಾಗಿದ್ದಾರೆ.
ಈ ನಡುವೆ 48,97,842 ಮಂದಿ ಸೋಂಕಿತರ ಪೈಕಿ 1,959,149 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಅಮೆರಿಕಾದಲ್ಲಿ ಒಂದರಲ್ಲಿಯೇ ಈ ವರೆಗೂ 1,570,583 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ರಷ್ಯಾದಲ್ಲಿ 299,941, ಸ್ಪೇನ್ 278,803, ಬ್ರಿಟನ್ 248,818, ಇಟಲಿ 226,699, ಫ್ರಾನ್ಸ್ 180,809, ಜರ್ಮನಿಯಲ್ಲಿ 177,827 ಮಂದಿ ಸೋಂಕಿಗೊಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.