ಮೊದಲ ಬಾರಿಗೆ ಇಟಲಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಇಳಿಮುಖ

ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿದ್ದ ಪ್ರವಾಸಿಗರ ನೆಚ್ಚಿನ ತಾಣ ಇಟಲಿಯಲ್ಲಿ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಬಾರಿಗೆ ಇಳಿಕೆ ಕಂಡುಬಂದಿದೆ.
ಇಟಲಿ ಸೇನೆ
ಇಟಲಿ ಸೇನೆ
Updated on: 

ರೋಮ್: ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿದ್ದ ಪ್ರವಾಸಿಗರ ನೆಚ್ಚಿನ ತಾಣ ಇಟಲಿಯಲ್ಲಿ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಬಾರಿಗೆ ಇಳಿಕೆ ಕಂಡುಬಂದಿದೆ.

ಹೌದು.. ಕಳೆದ 24 ಗಂಟೆಗಳಲ್ಲಿ ಇಟಲಿಯಲ್ಲಿ 300 ಹೊಸ ಸೋಂಕಿತರು ಕಂಡುಬಂದಿದ್ದು, ಇದು ಕಳೆದ ಫೆಬ್ರವರಿಯಿಂದೀಚೆಗೆ ದಾಖಲಾಗ ಕನಿಷ್ಠ ಮಟ್ಟದ ಹೊಸ ಪ್ರಕರಣಗಳಾಗಿವೆ. ಈ ಬಗ್ಗೆ ಇಟಲಿಯ ನ್ಯಾಷನಲ್ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ (NCPA) ಮಾಹಿತಿ ನೀಡಿದ್ದು, ಫೆಬ್ರವರಿ  29ರ ಬಳಿಕ ಇಟಲಿಯಲ್ಲಿ ಇದೇ ಮೊದಲ ಬಾರಿ ಕನಿಷ್ಟ ಪ್ರಮಾಣದಲ್ಲಿ ಹೊಸ ಸೋಂಕಿತರ ಸಂಖ್ಯೆ ಕಂಡುಬಂದಿದೆ.

ಅಂತೆಯೇ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲೂ ಶೇ.2.29ರಷ್ಟು ಕಡಿತವಾಗಿದ್ದು, ಇಟಲಿಯಲ್ಲಿ ಪ್ರಸ್ತುತ 55,300 ಸಕ್ರಿಯ ಕೊರೋನಾ ವೈರಸ್ ಸೋಂಕಿತರಿದ್ದಾರೆ. ಈ ಪೈಕಿ 541 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಒಂದೇ ದಿನ 12 ಮಂದಿ ಐಸಿಯುಯಿಂದ  ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಆಗಿದ್ದಾರೆ. ಇನ್ನು ಕಳೆದ 24ಗಂಟೆಗಳಲ್ಲಿ ಇಟಲಿಯಲ್ಲಿ 92 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಇಟಲಿಯಲ್ಲಿ ಸಾವನ್ನಪ್ಪಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ32,877ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಇಟಲಿಯಲ್ಲಿ ಕೊರೋನಾ ವೈರಸ್ ಸೋಂಕಿತರ  ಸಂಖ್ಯೆ 230,158ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com