ಕೊರೋನ ವೈರಸ್: 72,000 ಗಡಿ ದಾಟಿದ ಸಾವು, 13 ಲಕ್ಷಕ್ಕೂಹೆಚ್ಚು ಜನರನ್ನು ವ್ಯಾಪಿಸಿದ ವೈರಸ್

ಚೀನಾದಲ್ಲಿ ಮೊದಲ ಪತ್ತೆಯಾಗಿ ನಂತರದ ದಿನಗಲಲ್ಲಿ ಯುರೋಪ್ ದೇಶಗಳನ್ನೇ ಕೇಂದ್ರ ಸ್ಥಾನವಾಗಿ  ಮಾಡಿಕೊಂಡ ಕೊರೋನಾ ಸೋಂಕು ಇದೀಗ 13 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಾಸಿದ್ದು, 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರಿಸ್: ಚೀನಾದಲ್ಲಿ ಮೊದಲ ಪತ್ತೆಯಾಗಿ ನಂತರದ ದಿನಗಲಲ್ಲಿ ಯುರೋಪ್ ದೇಶಗಳನ್ನೇ ಕೇಂದ್ರ ಸ್ಥಾನವಾಗಿ  ಮಾಡಿಕೊಂಡ ಕೊರೋನಾ ಸೋಂಕು ಇದೀಗ 13 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಪಾಸಿದ್ದು, 72,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. 

ಕಳೆದೊಂದ ತಿಂಗಳ ಅವಧಿಯಲ್ಲಿ ಸೋಂಕು ವಿಶ್ವವ್ಯಾಪಿಯಾದ ರೀತಿ ಮತ್ತು ಹಬ್ಬಿದ ಪರಿ ಎಲ್ಲರನ್ನೂ ಆತಂತಕ್ಕೀಡು ಮಾಡಿದೆ. ಪ್ರಸಕ್ತ ವಿಶ್ವದ 210 ದೇಶಗಳಲ್ಲಿ ಹಬ್ಬಿರುವ ಕೊರೋನಾ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಮಾ.6ರಂದು ಮೊದಲ ಬಾರಿಗೆ 1 ಲಕ್ಷದ ಗಡಿ ದಾಟಿತ್ತು. ಆದರೆ, ಏ.6ರಂದು ಸೋಂಕು  13 ಲಕ್ಷ ಜನರಿಗೆ ತಗುಲಿದೆ. ್ಂದರೆ, ಒಂದೇ ತಿಂಗಳಲ್ಲಿ 12 ಲಕ್ಷ ಜನರಿಗೆ ವ್ಯಾಪಿಸಿದೆ. 

ಇನ್ನು ಜ.22ಕ್ಕೆ ಮೊದಲ ಸಾವು ಸಂಭವಿಸಿದ್ದರೆ, ಫೆ.10ರಂದು ಮೊದಲ ಬಾರಿಗೆ ಸಾವಿನ ಸಂಖ್ಯೆ 1000ದ ಗಡಿ ದಾಟಿತ್ತು. ಅದಾದ ಕೇವಲ 2 ತಿಂಗಳ ಅವಧಿಯಲ್ಲಿ ಸಾವಿನ ಸಂಖ್ಯೆ 75000 ತಲುಪಿದೆ. ಅಮೆರಿಕಾದಲ್ಲಿ ಸಾವಿನ ಸಂಖ್ಯೆ 10 ಸಾವಿರ, ಬ್ರಿಟನ್ ನಲ್ಲಿ 5 ಸಾವಿರದ ಗಡಿ ದಾಟಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com