ಲವ್ ಇನ್ ಕೊರೋನಾ ಟೈಮ್ಸ್: ಕ್ವಾರಂಟೈನ್ ನಿಯಮ ಮುರಿದು ಗರ್ಲ್'ಫ್ರೆಂಡ್ ನೋಡಲು ಹೋದ ವ್ಯಕ್ತಿ ಜೈಲುಪಾಲು! 

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಪ್ರೇಮಿಗಳ ಪಾಲಿಗೂ ದೊಡ್ಡ ಶತ್ರುವಾಗಿಯೇ ಪರಿಣಮಿಸಿದೆ. ಲಾಕ್'ಡೌನ್, ಕ್ವಾರಂಟೈನ್ ಗಳಿಂದಾಗಿ ಜನರು ಮನೆಗಳಲ್ಲಿಯೇ ಉಳಿಯುವಂತಾಗಿದ್ದು, ಲವರ್ಸ್ ಗಳು ಒಬ್ಬರನ್ನೊಬ್ಬರು ನೋಡಲಾಗದೆ ವಿಲವಿಲನೆ ಒದ್ದಾಡವಂತಾಗಿದೆ. ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬ ಗರ್ಲ್'ಫ್ರೆಂಡ್ ನೋಡುವ ಸಲುವಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಪ್ರೇಮಿಗಳ ಪಾಲಿಗೂ ದೊಡ್ಡ ಶತ್ರುವಾಗಿಯೇ ಪರಿಣಮಿಸಿದೆ. ಲಾಕ್'ಡೌನ್, ಕ್ವಾರಂಟೈನ್ ಗಳಿಂದಾಗಿ ಜನರು ಮನೆಗಳಲ್ಲಿಯೇ ಉಳಿಯುವಂತಾಗಿದ್ದು, ಲವರ್ಸ್ ಗಳು ಒಬ್ಬರನ್ನೊಬ್ಬರು ನೋಡಲಾಗದೆ ವಿಲವಿಲನೆ ಒದ್ದಾಡವಂತಾಗಿದೆ. ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬ ಗರ್ಲ್'ಫ್ರೆಂಡ್ ನೋಡುವ ಸಲುವಾಗಿ ಕ್ವಾರಂಟೈನ್ ನಿಯಮ ಮುರಿದ ಪರಿಣಾಮ ಇದೀಗ ಜೈಲು ಪಾಲಾಗಿರುವ ಘಟನೆ ನಡೆದಿದೆ. 

ಜೊನಾಥನ್ ಡೇವಿಡ್ (35) ಜೈಲು ಪಾಲಾಗಿರುವ ವ್ಯಕ್ತಿಯಾಗಿದ್ದಾರೆ. ಆಸ್ಟ್ರೇಲಿಯಾದ ಪೆರ್ತ್ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಈ ವ್ಯಕ್ತಿ ಪೊಲೀಸರ ಮೇಲೆ ಗುಂಡು ಹಾರಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎಂಬ ಆರೋಪಗಳು ಕೇಳಿ ಬಂದಿತ್ತು. 

ಕ್ವಾರಂಟೈನ್ ನಿಮಯ ಉಲ್ಲಂಘಿಸಿದ ಪರಿಣಾಮ ಪೊಲೀಸರು ಡೇವಿಡ್ ನನ್ನು ಬಂಧಿಸಿ ಪೆರ್ತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ವೇಳೆ ಆರಂಭದಲ್ಲಿ ಡೇವಿಡ್ ಆಹಾರಕ್ಕಾಗಿ ನಿಯಮ ಉಲ್ಲಂಘಿಸಿರುವುದಾಗಿ ಹೇಳಿದ್ದಾನೆ. ಬಳಿಕ ಗರ್ಲ್ ಫ್ರೆಂಡ್ ನೋಡುವ ಸಲುವಾಗಿ ನಿಯಮ ಉಲ್ಲಂಘಿಸಲಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆಂದು ಸೆವೆನ್ ನ್ಯೂಸ್ ವರದಿ ಮಾಡಿದೆ. 

ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ನಲ್ಲಿಯೇ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ಡೇವಿಡ್ ಅವರಿಗೆ ಅಧಿಕಾರಿಗಳು ಸೂಚಿಸಿದ್ದರು. 

ಹೋಟೆಲ್ ನಲ್ಲಿ ಕ್ವಾರಂಟೈನ್ ಮುಂದುವರೆಸಿದಿದ್ದರೆ, ಸೋಮವಾರ ಆತನನ್ನು ಬಿಡುಗಡೆ ಮಾಡುತ್ತಿದ್ದೆವು. ಆದರೆ, ಆತ ನಿಯಮ ಉಲ್ಲಂಘಿಸಿದ್ದು, ಇದೀಗ ಇಡೀ ತಿಂಗಳು ದಂಡದ ಜೊತೆಗೆ ಜೈಲುವಾಸ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವೈರಸ್ ವಿರುದ್ಧ ಆಸ್ಟ್ರೇಲಿಯಾ ಸರ್ಕಾರ ಕಠಿಣ ನಿಯಮಗಳನ್ನು ಅನುಸರಿಸುತ್ತಿದ್ದು, ಲಾಕ್'ಡೌನ್ ನಿಯಮ ಉಲ್ಲಂಘಿಸುವವರಿಗೆ ರೂ.1000ಕ್ಕೂ ಹೆಚ್ಚು ದಂಡವನ್ನು ವಿಧಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com