ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯತೆಗೆ ಬದ್ಧ: ಫಿಜರ್ ಸಂಸ್ಥೆ

ಭಾರತದ ದೇಶದಲ್ಲಿ ತನ್ನ ಸಂಸ್ಥೆಯ ಕೊರೋನಾ ವೈರಸ್ ಲಸಿಕೆ ಲಭ್ಯತೆಯಾಗುವಂತೆ ಮಾಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ಬ್ರಿಟನ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಹೇಳಿದೆ.
ಫಿಜರ್ ಲಸಿಕೆ
ಫಿಜರ್ ಲಸಿಕೆ

ನವದೆಹಲಿ: ಭಾರತದ ದೇಶದಲ್ಲಿ ತನ್ನ ಸಂಸ್ಥೆಯ ಕೊರೋನಾ ವೈರಸ್ ಲಸಿಕೆ ಲಭ್ಯತೆಯಾಗುವಂತೆ ಮಾಡುವಲ್ಲಿ ಸಂಸ್ಥೆ ಬದ್ಧವಾಗಿದೆ ಎಂದು ಬ್ರಿಟನ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಹೇಳಿದೆ.

ಅತ್ತ ಬ್ರಿಟನ್ ಸರ್ಕಾರ ತುರ್ತು ನಾಗರೀಕ ಬಳಕೆಗೆ ಫಿಜರ್ ಸಂಸ್ಥೆಯ ಲಸಿಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಫಿಜರ್ ಸಂಸ್ಥೆ ಭಾರತದಲ್ಲೂ ತನ್ನ ಲಸಿಕೆ ಲಭ್ಯತೆ ಕುರಿತು ಮಾಹಿತಿ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಫಿಜರ್/ಬಯೋಎನ್ ಟೆಕ್ ಸಂಸ್ಥೆಯ ವಕ್ತಾರರು, ಲಸಿಕೆ  ಸರಬರಾಜು ಕುರಿತು ಸಾಕಷ್ಟು ದೇಶಗಳ ಸರ್ಕಾರಗಳು ಮಾತುಕತೆಯಲ್ಲಿ ತೊಡಗಿವೆ. ಅಂತೆಯೇ ಭಾರತ ಸರ್ಕಾರ ಕೂಡ ಲಸಿಕೆಗೆ ಬೇಡಿಕೆ ಇಟ್ಟಿದ್ದು, ಭಾರತದಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ದೇಶದ ಪ್ರತೀಯೊಬ್ಬರೂ ಲಸಿಕೆ ಪಡೆಯುವ ಹಕ್ಕು ಹೊಂದಿದ್ದಾರೆ. ಈ ಬಗ್ಗೆ  ನಾವು ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. 

ಈ ಸಾಂಕ್ರಾಮಿಕ ಹಂತದಲ್ಲಿ, ಫಿಜರ್ ಈ ಲಸಿಕೆಯನ್ನು ಆಯಾ ಸರ್ಕಾರಿ ಅಧಿಕಾರಿಗಳೊಂದಿಗಿನ ಒಪ್ಪಂದಗಳ ಆಧಾರದ ಮೇಲೆ ಮತ್ತು ನಿಯಂತ್ರಕ ಅಧಿಕಾರ ಅಥವಾ ಅನುಮೋದನೆಯನ್ನು ಅನುಸರಿಸಿ ಸರ್ಕಾರಿ ಒಪ್ಪಂದಗಳ ಮೂಲಕ ಮಾತ್ರ ಪೂರೈಸಲಾಗುತ್ತದೆ. ಅಂತೆಯೇ ನಾವು  ಹೆಚ್ಚಿನ ಅಧಿಕಾರ ಮತ್ತು ಅನುಮೋದನೆಗಳನ್ನು ನಿರೀಕ್ಷಿಸುತ್ತಿರುವುದರಿಂದ, ವಿಶ್ವದಾದ್ಯಂತ ಉತ್ತಮ ಗುಣಮಟ್ಟದ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸಲು ನಾವು ಸರ್ಕಾರಗಳ ಮತ್ತು ಸಂಬಂಧ ಪಟ್ಟ ಪ್ರಾಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಫಿಜರ್ ಸಂಸ್ಥೆಯ ಅಧ್ಯಕ್ಷ  ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com