ವಿಶ್ವದಾದ್ಯಂತ ಕೊರೋನಾ ರೌದ್ರತಾಂಡವ: ಸೋಂಕಿತರ ಸಂಖ್ಯೆ 6.50 ಕೋಟಿಗೆ ಏರಿಕೆ
ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರೌದ್ರತಾಂಡವವನ್ನು ಮುಂದುವರೆಸಿದ್ದು, ಈ ವರೆಗೂ 6.50 ಕೋಟಿ ಜನರು ಸೋಂಕಿಗೊಳಗಾಗಿದ್ದಾರೆಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.
Published: 04th December 2020 12:49 PM | Last Updated: 04th December 2020 12:53 PM | A+A A-

ಸಂಗ್ರಹ ಚಿತ್ರ
ನ್ಯೂಯಾರ್ಕ್: ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರೌದ್ರತಾಂಡವವನ್ನು ಮುಂದುವರೆಸಿದ್ದು, ಈ ವರೆಗೂ 6.50 ಕೋಟಿ ಜನರು ಸೋಂಕಿಗೊಳಗಾಗಿದ್ದಾರೆಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ.
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ 65,048,192 ಮಂದಿ ಸೋಂಕಿಗೊಳಗಾಗಿದ್ದು, 1,512,223 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಮಹಾಮಾರಿ ಕೊರೋನಾ ವೈರಸ್ ಅಮೆರಿಕಾ, ಭಾರತ ಹಾಗೂ ಬ್ರೆಜಿಲ್ ರಾಷ್ಟ್ರಗಳಲ್ಲಿ ಆರ್ಭಟಿಸುತ್ತಲೇ ಇದೆ.
ಪ್ರಮುಖವಾಗಿ ಅಮೆರಿಕಾ ರಾಷ್ಟ್ರದಲ್ಲಿ ಕೊರೋನಾ ಮಟ್ಟಹಾಕುವುದು ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 2,10,000 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,102,568ಕ್ಕೆ ಏರಿಕೆಯಾಗಿದೆ. ಅಲ್ಲದೆ. ಬುಧವಾರ ಒಂದೇ ದಿನ 3,157 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 275,729ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ.