ಸಾರ್ಸ್ ಹೆಮ್ಮಾರಿಯನ್ನು ಹಿಂದಿಕ್ಕಿದ ಕೊರೋನಾವೈರಸ್: ಸಾವಿನ ಸಂಖ್ಯೆ 722ಕ್ಕೆ ಏರಿಕೆ

ಚೀನಾದಲ್ಲಿ ಸಾರ್ಸ್ ಮಹಾಮಾರಿಯನ್ನೂ ಹಿಂದಿಕ್ಕಿರುವ ಕೊರೋನಾ ವೈರಸ್, ತನ್ನ ಮರಣಮೃದಂಗವನ್ನು ಮುಂದುವರೆಸಿದ್ದು ಈವರೆಗೂ 722 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರಿದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವುಹಾನ್: ಚೀನಾದಲ್ಲಿ ಸಾರ್ಸ್ ಮಹಾಮಾರಿಯನ್ನೂ ಹಿಂದಿಕ್ಕಿರುವ ಕೊರೋನಾ ವೈರಸ್, ತನ್ನ ಮರಣಮೃದಂಗವನ್ನು ಮುಂದುವರೆಸಿದ್ದು ಈವರೆಗೂ 722 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರಿದಿಗಳಿಂದ ತಿಳಿದುಬಂದಿದೆ. 

ವೈರಸ್ ಪರಿಣಾಮ ಚೀನಾದಲ್ಲಿ ಮತ್ತೆ ನೂತನವಾಗಿ 86 ಮಂದಿ ಸಾವನ್ನಪ್ಪಿದ್ದಾರೆಂದು ಚೀನಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ 650 ಜನರನ್ನು ಬಲಿ ಪಡೆದುಕೊಂಡಿತ್ತು. ಅದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಕೊರೋನಾ ವೈರಸ್ ಇದೀಗ ಚೀನಾದಲ್ಲಿ ಮರಣ ಮೃದಂಗವನ್ನು ಬಾರಿಸುತ್ತಿದೆ. ಚೀನಾದಿಂದ 20 ಇತರೆ ದೇಶಗಳಿಗೂ ಈ ಮಾರಣಾಂತಿಕ ವೈರಸ್ ಹರಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ ಮೂವರು ವ್ಯಕ್ತಿಗಳಲ್ಲಿ ವೈರಸ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 

ಇದೀಗ ಮತ್ತೆ 3,399 ಮಂದಿಯಲ್ಲಿ ನೂತನವಾಗಿ ಸೋಂಕು ಪತ್ತೆಯಾಗಿದ್ದು, ಈ ವರೆಗೂ 34,500 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ವಿಶ್ವದಾಂದ್ಯತ ಕೊರೋನಾ ವೈರಸ್ ನಿಂದಾಗಿ ಈ ವರೆಗೂ 120 ಮಂದಿ ಸಾವನ್ನಪ್ಪಿದ್ದಾರೆ. 

ಈ ನಡುವೆ ಕೊರೋನಾ ವೈರಸ್'ಗೆ ಅಮೆರಿಕಾದ ಪ್ರಜೆಯೊಬ್ಬರು ಸಾವನ್ನಪ್ಪಿರುವುದಾಗಿ ಅಮೆರಿಕಾಯ ರಾಯಭಾರಿ ಕಚೇರಿ ದೃಢಪಡಿಸಿದೆ. 

ಕೊರೋನಾ ವೈರಸ್ ಸೋಂಕಿನಿಂದಾಗಿ ಅಮೆರಿಕಾ ಪ್ರಜೆಯೊಬ್ಬರು ಚೀನಾದ ವುಹಾನ್'ನ ಜಿನಿಂಟಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈರಸ್'ಗೆ ಅಮೆರಿಕಾದಲ್ಲಿ ಇದು ಮೊದಲ ಬಲಿಯಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com