ವಿಷ ಕಾರುವುದು, ದ್ವೇಷದ ಮಾತುಗಳೇ ಪಾಕಿಸ್ತಾನಕ್ಕೆ ಕರಗತ: ವಿಶ್ವಸಂಸ್ಥೆಯಲ್ಲಿ ಭಾರತ ಟೀಕೆ

ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ವಿಶ್ವಮಟ್ಟದಲ್ಲಿ ಪ್ರಸ್ತಾಪಿಸಿ ಭಾರತ ವಿರುದ್ಧ ಪ್ರತೀಬಾರಿ ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಕಿಡಿಕಾರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ವಿಶ್ವಮಟ್ಟದಲ್ಲಿ ಪ್ರಸ್ತಾಪಿಸಿ ಭಾರತ ವಿರುದ್ಧ ಪ್ರತೀಬಾರಿ ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರವಾಗಿ ಕಿಡಿಕಾರಿದೆ. 

ವಿಶ್ವಸಂಸ್ಥೆಯ 74ನೇ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಉಪ ಪ್ರತಿನಿಧಿ ನಾಗರಾಜ್ ನಾಯ್ಡು ಅವರು, ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. 

ವಿಶ್ವಸಂಸ್ಥೆಯ ಪ್ರತೀ ಸಭೆಯಲ್ಲಿಯೂ ಪಾಕಿಸ್ತಾನ ಭಾರತದ ವಿರುದ್ಧ ದ್ವೇಷಪೂರಿತ ಭಾಷಣ ಮಾಡುತ್ತದೆ. ಕೇವಲ ವಿಶ್ವಸಂಸ್ಥೆ ಅಷ್ಟೇ ಅಲ್ಲದೆ, ಯಾವುದೇ ಅಂತರಾಷ್ಟ್ರೀಯ ವೇದಿಕೆಯಲ್ಲಿಯೂ ಭಾರತದ ವಿರುದ್ಧ ವಿಷ ಹಾಗೂ ಸುಳ್ಳು ನಿರೂಪಣೆಗಳನ್ನೇ ನೀಡುತ್ತದೆ. ನೀರಿಗೆ ಮೀನು ಇಳಿದಂತೆ ಪಾಕಿಸ್ತಾನ ಕೂಡ ಒಂದೊಂದು ಸಭೆಯಲ್ಲಿಯೂ ದ್ವೇಷಪೂರಿತ ಭಾಷಣವನ್ನು ಮಾಡುತ್ತದೆ ಎಂದು ಹೇಳಿದ್ದಾರೆ. 

ತಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತ ಜನರನ್ನು ರಕ್ಷಣೆ ಮಾಡದ ದೇಶ, ಇತರೆ ದೇಶದ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯವನ್ನು ತರಿಸುತ್ತಿದೆ. ಸುಳ್ಳು ಹೇಳುವುದನ್ನು ಪಾಕಿಸ್ತಾನ ಅಭ್ಯಾಸ ಮಾಡಿಕೊಂಡಿದೆ. ತನ್ನ ಸುಳ್ಳು ವಾಕ್ಚಾತುರ್ಯವನ್ನು ಸ್ವೀಕಾರ ಮಾಡುವವರು ಯಾರೂ ಇಲ್ಲ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ರಾಜತಾಂತ್ರಿಕತೆಯ ಸಾಮಾನ್ಯ ವ್ಯವಹಾರ ನಡೆಸಿ ಪ್ರತಿಬಿಂಬಿಸುವುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ. 

ವಿಶ್ವಸಂಸ್ಥಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಅಧಿಕಾರಿ ಸಾದ್ ಅಹ್ಮದ್ ವಾರೈಚ್, ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com