ವಿಶ್ವದಾದ್ಯಂತ ಕೊರೋನಾ ಸ್ಫೋಟ: ಸೋಂಕಿತರ ಸಂಖ್ಯೆ 1.11 ಕೋಟಿ, 5.23 ಲಕ್ಷ ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 11,190,678ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನಿವಾ: ವಿಶ್ವದಾದ್ಯಂತ ಕೊರೋನಾ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ 11,190,678ಕ್ಕೆ ಏರಿಕೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ವಿಶ್ವ ವಿವಿಧ ರಾಷ್ಟ್ರಗಳನ್ನು ಎಡೆಬಿಡದೆ ಕಾಡುತ್ತಿರುವ ಮಹಾಮಾರಿ ವೈರಸ್ ಈ ವರೆಗೂ 523,613 ಮಂದಿಯನ್ನು ಬಲಿಪಡೆದುಕೊಂಡಿದೆ. ವೈರಸ್ ಮಟ್ಟ ಹಾಕಲು ಇಡೀ ವಿಶ್ವವೇ ಇದೀಗ ಕಂಗಾಲಾಗುವಂತೆ ಮಾಡಿದೆ. 

ಇನ್ನು 11,190,678 ಮಂದಿ ಸೋಂಕಿತರ ಪೈಕಿ ಈ ವರೆಗೂ 6,297,610 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 4,363,955 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಅಮೆರಿಕಾ ಒಂದು ರಾಷ್ಟ್ರದಲ್ಲಿಯೇ 129,275 ಮಂದಿ ಸಾವನ್ನಪ್ಪಿದ್ದು, ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 1,496,858ಕ್ಕೆ ತಲುಪಿದ್ದು, 61,884 ಮಂದಿ ಬಲಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com