ಚೀನಾ, ಭಾರತ ಸಾಕಷ್ಟು ಶ್ರೀಮಂತ, ಆದರೆ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುವುದಿಲ್ಲ: ಅಮೆರಿಕ ಸೆನೆಟರ್

ಚೀನಾ ಹಾಗೂ ಭಾರತ ಕಳೆದ 2 ದಶಕಗಳಲ್ಲಿ ಸಾಕಷ್ಟು ಶ್ರೀಮಂತ ದೇಶಗಳಾಗಿವೆ. ಆದರೆ ಜವಾಬ್ದಾರಿಯ ವಿಷಯ ಬಂದಾಗ ಮುಂದೆ ಬರುವುದಿಲ್ಲ ಎಂದು ಅಮೆರಿಕದ ಟಾಪ್ ಸೆನೆಟರ್ ಚಕ್ ಗ್ರಾಸ್ಲೆ ಹೇಳಿದ್ದಾರೆ. 

Published: 30th July 2020 03:52 PM  |   Last Updated: 30th July 2020 04:28 PM   |  A+A-


China, India got lot richer but refused to take on any more responsibilities: Top US Senator

ಚೀನಾ, ಭಾರತ ಸಾಕಷ್ಟು ಶ್ರೀಮಂತವಾಗಿವೆ, ಆದರೆ ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಮುಂದಾಗುವುದಿಲ್ಲ: ಅಮೆರಿಕ ಸೆನೆಟರ್

Posted By : srinivasrao
Source : Online Desk

ವಾಷಿಂಗ್ ಟನ್: ಚೀನಾ ಹಾಗೂ ಭಾರತ ಕಳೆದ 2 ದಶಕಗಳಲ್ಲಿ ಸಾಕಷ್ಟು ಶ್ರೀಮಂತ ದೇಶಗಳಾಗಿವೆ. ಆದರೆ ಜವಾಬ್ದಾರಿಯ ವಿಷಯ ಬಂದಾಗ ಮುಂದೆ ಬರುವುದಿಲ್ಲ ಎಂದು ಅಮೆರಿಕದ ಟಾಪ್ ಸೆನೆಟರ್ ಚಕ್ ಗ್ರಾಸ್ಲೆ ಹೇಳಿದ್ದಾರೆ. 

ಅಮೆರಿಕದ ಬಲಿಷ್ಠ ಸೆನೆಟ್ ಫೈನಾನ್ಸ್ ಕಮಿಟಿಯ ಅಧ್ಯಕ್ಷರಾಗಿರುವ ಚಕ್ ಗ್ರಾಸ್ಲೆ ಭಾರತ, ಚೀನಾ ರಾಷ್ಟ್ರಗಳು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ವಾಸ್ತವದಲ್ಲಿ ಯಾವುದೇ ವ್ಯವಹಾರಗಳಲ್ಲಿಯೂ ಅಭಿವೃದ್ಧಿಶೀಲ ದೇಶಗಳೆಂಬ ಹಣೆಪಟ್ಟಿ ಹೊತ್ತು ವಿಶೇಷವಾಗಿ ನಡೆಸಿಕೊಳ್ಳಬೇಕೆಂದು ಬಯಸುತ್ತವೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ವಹಿವಾಟು ವಿಷಯ ಎದುರಾದಾಗ ಈ ಅಸಮತೋಲನವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟ್ರಂಪ್ ನಡೆಯನ್ನು ಚಕ್ ಗ್ರಾಸ್ಲೆ ಶ್ಲಾಘಿಸಿದ್ದಾರೆ. 

ಕ್ಯಾಮೆರೂನ್ ನಂತಹ ಕೇಂದ್ರ ಆಫ್ರಿಕಾದ ರಾಷ್ಟ್ರಗಳಿಗೆ ನೀಡಲಾಗುವ ವಿನಾಯಿತಿಯನ್ನು ನೀಡಬೇಕೆಂಬ ಬೇಡಿಕೆ ಹಾಸ್ಯಾಸ್ಪದ ಎಂದೂ ಚಕ್ ಗ್ರಾಸ್ಲೆ ಹೇಳಿದ್ದಾರೆ. 

ಈ ಕಾರಣದಿಂದಾಗಿ ಅಸಮತೋಲನದ ಬಗ್ಗೆ ಪ್ರಶ್ನಿಸಿ ಡಬ್ಲ್ಯೂಟಿಒ ವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಶ್ಲಾಘನೀಯ ಎಂದು ಚಕ್ ಗ್ರಾಸ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp