ಕೊರೋನಾ ವೈರಸ್: ಜಗತ್ತಿನಾದ್ಯಂತ 4.5 ಲಕ್ಷ ದಾಟಿದ ಸಾವಿನ ಸಂಖ್ಯೆ

ಮಾರಕ ಕೊರೋನದಿಂದ ಜಗತ್ತಿನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ಮಾರಕ ಕೊರೋನದಿಂದ ಜಗತ್ತಿನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ.

ಗುರುವಾರದವರೆಗೆ ಒಟ್ಟು 4 53,216 ಸಾವುಗಳು ವರದಿಯಾಗಿವೆ. ಈ ನಡುವೆ ವಿಶ್ವದಾದ್ಯಂತ ಖಚಿತಪಟ್ಟ ಸೋಂಕು ಪ್ರಕರಣಗಳು ಸಂಖ್ಯೆ 8,463,533 ಕ್ಕೆ ಏರಿಕೆಯಾಗಿದೆ.

ಈ ನಡುವೆ ಅಮೆರಿಕಾದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಈ ವರೆಗೂ ಆ ರಾಷ್ಟ್ರದಲ್ಲಿ ಮಹಾಮಾರಿ ವೈರಸ್'ಗೆ 120,688 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 2,263,651 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com