ಕೊರೋನಾ ಸಾಂಕ್ರಾಮಿಕದ ನಡುವೆಯೇ ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದ ಅಮೆರಿಕ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಅಮೆರಿಕ ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಅಮೆರಿಕ ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ.

ಹೌದು.. ಕೊರೋನಾ ವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಮೆರಿಕದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರುವ ಸಂಬಂಧ ಭಾರತ ಸರ್ಕಾರ ಮತ್ತು ಇಂಡಿಯನ್ ಏರ್ ಲೈನ್ಸ್ ವಿಶೇಷ ವಿಮಾನಗಳನ್ನು ರವಾನೆ ಮಾಡುತ್ತಿದೆ. ಆ ಮೂಲಕ ಅಮೆರಿಕದಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆ ತರುತ್ತಿದೆ. ಇದೇ ವಿಶೇಷ ವಿಮಾನಗಳಿಗೆ ಅಮೆರಿಕ ಸರ್ಕಾರ ಇದೀಗ ನಿರ್ಬಂಧ ಹೇರಿದ್ದು, ಭಾರತದ ಪಕ್ಷಪಾತಿ ಧೋರಣೆಗೆ ವಿರುದ್ಧವಾಗಿ ತಾನೂ ಕೂಡ ಈ ಕಠಿಣ ನಿರ್ಧಾರ ತಳೆದಿರುವುದಾಗಿ ಹೇಳಿದೆ.

ಅಮೆರಿಕದ ನಿರ್ಧಾರಕ್ಕೆ ಕಾರಣವೇನು?
ಅಮೆರಿಕದಂತೆಯೇ ಭಾರತದಲ್ಲೂ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಈಗಾಗಲೇ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ವಿದೇಶಗಳಿಂದ ಬರುತ್ತಿದ್ದವರಿಂದ ವೈರಸ್ ಸೋಂಕು ಗಣನೀಯವಾಗಿ ಪ್ರಸರಣವಾಗುತ್ತಿದ್ದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ವಿದೇಶಗಳ ವಿಮಾನಯಾನ ರದ್ದು ಮಾಡಿತ್ತು. ಅಲ್ಲದೆ ವಿದೇಶಿ ವಿಮಾನಗಳ ಹಾರಾಟಕ್ಕೂ ಬ್ರೇಕ್ ಹಾಕಿತ್ತು. ಆದರೆ ವಿದೇಶಗಳಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ವಂದೇ ಭಾರತ್ ಮಿಷನ್ ನಡಿಯಲ್ಲಿ ಏರ್ ಇಂಡಿಯಾ ವಿಶೇಷ ವಿಮಾನಗಳನ್ನು ರವಾನೆ ಮಾಡುತ್ತಿದ್ದು, ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆದುಕೊಂಡು ಬರಲಾಗುತ್ತಿದೆ. ಈಗಾಗಲೇ ಲಕ್ಷಾಂತರ ಭಾರತೀಯರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಇನ್ನೂ ಲಕ್ಷಾಂತರ ಮಂದಿ ಭಾರತೀಯರು ವಿದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅವರ ಸ್ಥಳಾಂತರಕ್ಕೆ ಕಾರ್ಯಾಚರಣೆ ನಡೆಸುತ್ತಿದೆ.

ಅಮೆರಿಕ ಆರೋಪವೇನು?
ವಿದೇಶಗಳಲ್ಲಿರುವ ಭಾರತೀಯರಿಗಾಗಿ ಭಾರತ ತನ್ನ ವಿಶೇಷ ವಿಮಾನಗಳನ್ನು ಓಡಿಸುತ್ತಿದೆ ನಿಜ. ಆದರೆ ಏರ್ ಇಂಡಿಯಾ ಸಾರ್ವಜನಿಕರಿಗೆ ಟಿಕೆಟ್  ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ಇದರಿಂದ ವಂಚಿತವಾಗುತ್ತಿವೆ. ಇದೇ ಕಾರಣಕ್ಕೆ ತಾನೂ ಕೂಡ ಭಾರತದ ವಿಶೇಷ ವಿಮಾನಗಳಿಗೆ ಮತ್ತು ಚಾರ್ಡೆಡ್ ವಿಮಾನಗಳಿಗೆ ನಿರ್ಬಂಧ ಹೇರಿರುವುದಾಗಿ ಅಮೆರಿಕ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com