ಕೊವಿಡ್-19: 3 ಕೋಟಿ 24 ಲಕ್ಷ ದಾಟಿದ ಜಾಗತಿಕ ಸೋಂಕಿತರ ಸಂಖ್ಯೆ

ಜಾಗತಿಕ ಕೊವಿಡ್-19 ಸೋಂಕಿತರ ಸಂಖ್ಯೆ ಗುರುವಾರ 3 ಕೋಟಿ 24 ಲಕ್ಷ ದಾಟಿದ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ.
ಅಮೆರಿಕದ ಮಿಯಾಮಿ ಬೀಚ್ ಬಳಿ ಆರೋಗ್ಯ ಕಾರ್ಯಕರ್ತರು ಮಾಹಿತಿ ಪಡೆಯುತ್ತಿರುವುದು
ಅಮೆರಿಕದ ಮಿಯಾಮಿ ಬೀಚ್ ಬಳಿ ಆರೋಗ್ಯ ಕಾರ್ಯಕರ್ತರು ಮಾಹಿತಿ ಪಡೆಯುತ್ತಿರುವುದು

ನ್ಯೂಯಾರ್ಕ್: ಜಾಗತಿಕ ಕೊವಿಡ್-19 ಸೋಂಕಿತರ ಸಂಖ್ಯೆ ಗುರುವಾರ 3 ಕೋಟಿ 24 ಲಕ್ಷ ದಾಟಿದ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ.

ಜಾಗತಿಕ ಪ್ರಕರಣಗಳ ಸಂಖ್ಯೆ ಸದ್ಯ 3,24,16,405 ಕ್ಕೆ ತಲುಪಿದ್ದು, ವಿಶ್ವದಾದ್ಯಂತ ಮಾರಕ ಸೋಂಕಿನಿಂದ ಸಾವಿನ ಸಂಖ್ಯೆ 9,87,813ಕ್ಕೆ ಏರಿಕೆಯಾಗಿದೆ. ಅಂತೆಯೇ ಒಟ್ಟಾರೆ ಸೋಂಕಿತರ ಪೈಕಿ 2,39,34,098 ಮಂದಿ ಸೋಂಕಿತರು ಈ ವರೆಗೂ ಗುಣಮುಖರಾಗಿದ್ದಾರೆ ಎಂದು ಸಿಎಸ್ಎಸ್ಇ ಮಾಹಿತಿ ತಿಳಿಸಿದೆ.

ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿದ್ದು, ಈ ವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 71,85,471ಕ್ಕೆ ಏರಿಕೆಯಾಗಿದ್ದು, ಮತ್ತು 2,07,538 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 58,18,571 ಕ್ಕೆ ಏರಿಕೆಯಾಗಿದೆ. ಭಾರತ ನಂತರ ಸ್ಥಾನದಲ್ಲಿರುವ ಬ್ರೆಜಿಲ್‍ ನಲ್ಲಿ 46,59,909 ಪ್ರಕರಣಗಳು ಮತ್ತು 1,39,883 ಸಾವುಗಳು ವರದಿಯಾಗಿವೆ. ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 11,28,836ಕ್ಕೆ ಏರಿಕೆಯಾಗಿದ್ದು, 19,948 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 

7,00,000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ದೇಶಗಳಲ್ಲಿ ರಷ್ಯಾ, ಕೊಲಂಬಿಯಾ, ಪೆರು, ಮೆಕ್ಸಿಕೊ ಮತ್ತು ಸ್ಪೇನ್ ಸೇರಿವೆ. 35,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ ದೇಶಗಳಲ್ಲಿ ಅಮೆರಿಕ, ಬ್ರೆಜಿಲ್ ಭಾರತ, ಮೆಕ್ಸಿಕೊ, ಬ್ರಿಟನ್ ಮತ್ತು ಇಟಲಿ ಸೇರಿವೆ ಎಂದು ಕೇಂದ್ರ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com